Posts

Showing posts from June, 2019

ಅಮ್ಮಮ್ಮ...

Image
ಅಮ್ಮಮ್ಮ… ನೀವಿಲ್ಲದೆ ಇಂದಿಗೆ ಒಂದು ವರ್ಷ! ಕಾಲ ಎಷ್ಟು ಆತುರದಲ್ಲಿದೆ? ನಿಮ್ಮ ತಣ್ಣಗಿನ ಕೆನ್ನೆಯನ್ನು ಕೊನೆಯ ಬಾರಿಗೆ ಒತ್ತಿ ಹಿಡಿದ ನನ್ನ ಕೈಗಳು ಈಗಿನ್ನೂ ನಡೆದು ಹೋದ ಘಟನೆಯೇನೋ ಎಂಬಂತೆ ಆ ಸ್ಪರ್ಶವನ್ನು ನೆನಪಿಟ್ಟುಕೊಂಡಿವೆ. ಸದ್ದಿಲ್ಲದೆ ಬದುಕಿಗೆ ಪೂರ್ಣವಿರಾಮವಿಟ್ಟ ನೀವು ನಮ್ಮೊಂದಿಗೆ ಇಲ್ಲ ಎನ್ನುವುದು ಒಂದು ವರ್ಷ ಕಳೆದ ಮೇಲೂ ಒಮ್ಮೊಮ್ಮೆ ಅನುಮಾನ ಹುಟ್ಟಿಸುತ್ತದೆ. ನಿಮ್ಮ ವಿಚಿತ್ರ ನಗು, ಸುಮ್ನಿರು ಮಾರಾಯ್ನೇ ಎಂಬ ಮಾತು, ಆಹಾಹಾ.. ಎಂಬ ಉದ್ಘಾರ, ಖುಷಿಯಾದಾಗಲೆಲ್ಲಾ ತಟ್ಟುತ್ತಿದ್ದ ಜೋರು ಚಪ್ಪಾಳೆ, ರಾತ್ರಿ ಕಾಲು ನೀಡಿಕೊಂಡು ಔಷಧಿ ತೆಗೆದುಕೊಳ್ಳುತ್ತಿದ್ದ ರೀತಿ, ಉಬ್ಬಸ ಶುರುವಾದಾಗ ಸದ್ದು ಮಾಡುತ್ತಾ ಎಳೆದುಕೊಳ್ಳುತ್ತಿದ್ದ ಉಸಿರು ಎಲ್ಲವೂ ನಮ್ಮ ಕಣ್ಣು, ಕಿವಿಗಳಲ್ಲಿ ಜೀವಂತ ಇವೆ. ಭೌತಿಕವಾಗಿ ನೀವಿಲ್ಲವೆನ್ನುವುದನ್ನು ಬಿಟ್ಟರೆ, ನೀವು ಹೋಗಿದ್ದೀರಿ ಎನ್ನುವುದಕ್ಕೆ ಬೇರೆ ಪುರಾವೆಗಳನ್ನು ಕೊಡುವುದು ಕಷ್ಟ! ಆ ಹಳೆ ಕಾಲದ ದೊಡ್ಡ ಮನೆಯಲ್ಲಿ ಎಲ್ಲೇ ನಿಂತರೂ ಕೇಳುವಂತಿದ್ದ ನಿಮ್ಮ ಧ್ವನಿ, ಜಗುಲಿಯ ಮುಂಡಿಗೆ ಕಂಬಕ್ಕೆ ಒರಗಿ ನಿಲ್ಲುತ್ತಿದ್ದ ರೀತಿ, ಮಕ್ಕಳು, ಮೊಮ್ಮಕ್ಕಳು ಯಾರಾದರೂ ಮನೆಗೆ ಬರುತ್ತಾರೆ ಎಂಬುದು ಗೊತ್ತಿದ್ದಾಗ ಹೊರಗಿನ ಬಾಗಿಲ್ಲಲ್ಲೇ ಕಾದು ನಿಂತು ನಗು ಬೀರುತ್ತಿದ್ದ ಪರಿ ಇವನ್ನೆಲ್ಲಾ ಮರೆಯುವುದಾದರೂ ಹೇಗೆ? ಮೊಮ್ಮಕ್ಕಳೆಂದರೆ ನಿಮಗೆ ಜಾಸ್ತಿ ಇಷ್ಟ ಅಲ್ವಾ!? ಆದರೆ, ಅಷ್ಟೂ ಜನ ಮೊಮ್ಮಕ್ಕಳ ಪೈ

ಔಟ್‌ಡೇಟೆಡ್ ಹುಡುಗ ನಾನು.

Image
ಬದಲಾವಣೆ ಜಗದ ನಿಯಮ, ಕಾಲಕ್ಕೆ ತಕ್ಕಂತೆ ಬದಲಾವಣೆ ಸಹಜ ಎಂಬ ಉಪದೇಶಗಳನ್ನೆಲ್ಲಾ ನಾವು ದಿನಾಲೂ ಕೇಳಿರುತ್ತೇವೆ, ನೋಡಿರುತ್ತೇವೆ, ಅನುಭವಿಸಿರುತ್ತೇವೆ. ಕೆಲವೊಂದು ಬದಲಾವಣೆಗಳು ನಮಗೆ ಗೊತ್ತಿಲ್ಲದಂತೆ ನಮ್ಮನ್ನಾವರಿಸಿಬಿಡುತ್ತವೆ. ಆದರೆ ಕೆಲವು ವಿಚಾರಗಳು ಮಾತ್ರ ನಮಗೂ ಅವುಗಳಿಗೂ ಆಣೆಭಾಷೆ ಆಗಿದೆಯೇನೋ ಎಂಬಂತೆ ಎಷ್ಟೇ ಬಯಸಿದರೂ ನಮ್ಮದಾಗದೇ ಬದಲಾವಣೆಗೆ ಅನುವು ಮಾಡಿಕೊಡದೇ ಹಾಗೆಯೇ ಉಳಿದುಕೊಳ್ಳುತ್ತವೆ. ಅಂತಹ ವಿಚಾರಗಳನ್ನು ನಾವು ಎಷ್ಟೇ ಸಹಜವಾಗಿ ತೆಗೆದುಕೊಂಡರೂ, ಅದರಲ್ಲೇ ಖುಷಿ ಕಂಡುಕೊಂಡರೂ ಯಾವುದೋ ಮಾಯಕದಲ್ಲಿ ಹೊತ್ತಲ್ಲದ ಹೊತ್ತಲ್ಲಿ ತಲೆ ಹೊಕ್ಕು ನಮ್ಮನ್ನು ಔಟ್‌ಡೇಟೆಡ್ ಎಂಬಂತೆ ಬಿಂಬಿಸಿ ನಮ್ಮೊಳಗೆ ತೊಳಲಾಟವೊಂದನ್ನು ಹುಟ್ಟುಹಾಕುತ್ತವೆ. ಹಾಗಂತ ಒತ್ತಾಯ ಪೂರ್ವಕವಾಗಿ ಬದಲಾವಣೆ ಬಯಸಿದರೆ ವಿಚಿತ್ರ, ವಿಸ್ಮಯ ಜೀವಿಗಳಂತೆ ಕಂಡು ನಮ್ಮ ಮೇಲೆ ನಮಗೇ ರೇಜಿಗೆ ಹುಟ್ಟಿಬಿಡುವ ಸಾಧ್ಯತೆಯೂ ಹೆಚ್ಚು! ಇಂತಹ ಪೇಚಾಟಕ್ಕೆ ಸಿಲುಕಿದವರ ಗೋಳು ಮುಗಿಯದ ಮೆಗಾ ಧಾರಾವಾಹಿಗಳಂತೆ! ಕಾಲೇಜಿನ ಮೆಟ್ಟಿಲು ಹತ್ತಿದ ಮೊದಲ ದಿನ. ಕ್ರಾಪ್ ತೆಗೆದು ತಲೆ ಬಾಚಿಕೊಂಡು, ಹಣೆಗೆ ಚಿಕ್ಕದಾಗಿ ಕುಂಕುಮ ಇಟ್ಟುಕೊಂಡು, ಎರಡು ಜೇಬಿನ ಚೌಕಳಿ ಶರ್ಟು, ಕಪ್ಪು ಪ್ಯಾಂಟು ತೊಟ್ಟು, ಕೈಗೊಂದು ವಾಚ್ ಕಟ್ಟಿಕೊಂಡು ಕ್ಲಾಸ್ ರೂಮಿನೊಳಗೆ ಕಾಲಿಟ್ಟಿದ್ದೆ. ಹೊರಗಿನ ವಾತಾವರಣ ಸಾಧಾರಣವಾಗಿತ್ತು ಅನ್ಸತ್ತೆ ಆದ್ರೆ ಕ್ಲಾಸ್ ರೂಮಿನ ಒಳಗೆ ಹೊಸತಾಗಿ ಬಂದವರು ತಮ್ಮ ತ