Posts

Showing posts from January, 2018

ಪುನರ್ವಸು

Image
            ಆಷಾಢ ಮಾಸದ ಪುನರ್ವಸು ಮಳೆಯಿದ್ದಿರಬೇಕು, ನನ್ನ ಜೀವನದಲ್ಲಿ ಅಂತಹಾ ಮಳೆಯನ್ನು ಎಂದೂ ನೋಡಿರಲಿಲ್ಲ. ಅದ್ಯಾರ ಮೇಲಿನ ಮುನಿಸಿಗೆ ಮೋಡ ತನ್ನ ಗರ್ಭವನ್ನು ಹಿಸುಕಿಕೊಂಡಿತ್ತೋ ಗೊತ್ತಿಲ್ಲ. "ತುಂಬಾ ಮಳೆ ಅಲ್ವಾ?" ಹಳೆಯ ಮೂಕಾಂಬಿಕಾ ಬಸ್ಸಿನ ಕಿಟಕಿ ಸಂದಿಯಿಂದ ಒಳಹೊಕ್ಕು ಸೀಟನ್ನಾಕ್ರಮಿಸಿಕೊಳ್ಳಲು ಯತ್ನಿಸುತ್ತಿದ್ದ ಮಳೆ ನೀರಿನಾಸೆಗೆ ಕಲ್ಲು ಹಾಕಲು ಹೆಣಗಾಡುತ್ತಿದ್ದ ನನ್ನೆಡೆಗೆ ನಾಟಕೀಯವಾಗಿಯೇ ಪ್ರಶ್ನೆಯೊಂದನ್ನು ತೂರಿದಳು. "ವಿಷ್ಯಕ್ಕೆ ಬಾ" ತುಂಬಾ ಸ್ಪಷ್ಟವಾಗಿ ಹೇಳಿದೆ. ತನ್ನ ಹಳೇ ಸ್ಟೈಲಿನಲ್ಲೇ ಮುಂಗುರುಳು ಸರಿಸುತ್ತಾ, ಇರಿಸುಮುರಿಸಾದವಳಂತೆ ಒಂದಿಂಚು ದೂರ ಸರಿದು ಕೂರುವಷ್ಟರಲ್ಲಿ ಏಜೆಂಟರ್ ದೇವಣ್ಣ ನನ್ನೆಡೆಗೆ ಪರಿಚಿತದ ನಗು ಬೀರಿ, ಎರಡೂ ಟಿಕೆಟ್ ನೀನೇ ಮಾಡಿಸ್ತೀಯಾ? ಅಂತ ಕಣ್ಸನ್ನೆಯಲ್ಲೇ ಕೇಳಲು, ಹುಡುಗಿಯರು ಜೊತೆಗಿದ್ದಾಗ ಅವರ ಖರ್ಚನ್ನು  ನಾವೇ ಭರಿಸಬೇಕೆಂಬ ಅಲಿಖಿತ ನಿಯಮವನ್ನು  ಪಾಲಿಸುವ ಸಲುವಾಗಿ ಮಳೆಯಲ್ಲಿ ನೆಂದು ಒಂದಕ್ಕೊಂದು ಬೆಸೆದುಕೊಂಡಿದ್ದ ಐವತ್ತು ರೂಪಾಯಿಯ ಎರಡು ನೋಟುಗಳನ್ನು ಅಂಗಿಯ ಜೇಬಿನಿಂದ ಜೋಪಾನವಾಗಿ ಹೊರಗೆಳೆದು ದೇವಣ್ಣನ ಕೈಗಿತ್ತು "ಒಂದ್ ತೀರ್ಥಹಳ್ಳಿ, ಒಂದ್ ಮಂಡಗದ್ದೆ" ಎಂದು ಅದಾಗ ತಾನೇ ಬಂದಿದ್ದ ಡಿಜಿಟಲ್ ಟಿಕೆಟ್ ಮಶೀನಿನಿಂದ ಕಿರ್ರ್ ಕಿರ್ರ್ ಎಂದು ಸದ್ದು ಮಾಡುತ್ತಾ ಹೊರ ಬರುತ್ತಿದ್ದ ಟಿಕೆಟ್ ಚೀಟಿಯನ್ನು ಗಮನಿಸುತ್ತಾ ಕುಳಿತೆ.

ಗಾಂಧಿ ಕ್ಲಾಸ್..!

Image
ಗಾಂಧಿ.. ಇದೊಂದು ಹೆಸರು ದುರುಪಯೋಗಕ್ಕೊಳಗಾದಷ್ಟು ಮತ್ಯಾವ ಹೆಸರುಗಳೂ ಆಗಿರಲಿಕ್ಕಿಲ್ಲ.. ರಾಜಕೀಯ ನಾಯಕರಿಂದ ಹಿಡಿದು, ಶಾಲಾ ಮಕ್ಕಳ ತನಕ ಎಲ್ಲರ ಬಾಯಲ್ಲೂ ಗಾಂಧಿ ಇದ್ದೇ ಇರ್ತಾರೆ. ಇದೊಂಥರಾ "ನಾಮವೊಂದು ರೂಪ ಹಲವು". ಆಗ ನಾನಿನ್ನೂ ನಾಲ್ಕನೇ ತರಗತಿ ವಿದ್ಯಾರ್ಥಿ ಇರಬಹುದು.. ಒಂದೆಡೆ ಮೇಷ್ಟ್ರು ಕೊಡುವ ಬೆತ್ತದೇಟು, ಮತ್ತೊಂದೆಡೆ ಮನೆಯಲ್ಲಿ ಅಮ್ಮ ಕರುಣಿಸುತ್ತಿದ್ದ ಕೆಂಪನೆಯ ಬರೆ, ಫಟ್ ಎಂದು ಒಂದೇಟು ಕೊಟ್ಟರೆ ಐದು ಕೈಬೆರಳುಗಳ ಅಚ್ಚೂ ತೊಡೆಯ ಮೇಲೆ ಹಾಜರ್!! ಇಂತಹ ಪರಿಸ್ಥಿತಿಯಲ್ಲಿ ವಿಧೇಯ ವಿದ್ಯಾರ್ಥಿ ಆಗದಿದ್ದರೆ ಉಳಿಗಾಲವಿಲ್ಲ ಎಂದು ಅರಿವಾಗಿ ಶಿಸ್ತಿನ ಸಿಪಾಯಿಯಾಗಿದ್ದೆ. ನಾಲ್ಕು ದಿನಗಳ ಕಾಲ ರಜೆಯಿದ್ದರೆ, ರಜೆಯ ಮೊದಲ ದಿನವೇ ಹೋಂ ವರ್ಕ್ ಎಲ್ಲಾ ಮುಗಿಸಿಡುವುದೇನು? ತರಗತಿಯಲ್ಲಿ ಕೇಳಿದ ಪ್ರಶ್ನೆಗೆಲ್ಲಾ ಥಟ್ಟನೆ ಎದ್ದು ಉತ್ತರಿಸುವುದೇನು? ಸಹಪಾಠಿಗಳೆಲ್ಲಾ ಒಂಬತ್ತರ ಮಗ್ಗಿಗೇ ತಡವರಿಸುತ್ತಿದ್ದರೆ ನಾನು ಮಾತ್ರ ಇಪ್ಪತ್ನಾಲ್ಕೊಂದ್ಲಿ ಇಪ್ಪತ್ನಾಲ್ಕ ಎಂದು ರಾಜಗಾಂಭೀರ್ಯದಿಂದ ಮೇಷ್ಟ್ರ ಮುಂದೆ ನಿಲ್ಲುವುದೇನು? ಆಹಾ!! ಮೆರೆದಿದ್ದೇ ಮೆರೆದಿದ್ದು. ನಾನು ಪಟಪಟನೆ ಉತ್ತರಿಸುತ್ತಿದ್ದರೆ ಮೇಷ್ಟ್ರಿಗೆ ಖುಷಿಯೋ ಖುಷಿ, ಅದೇ ಖುಷಿಯಲ್ಲಿ ಪಕ್ಕದಲ್ಲಿ ಉತ್ತರಿಸಲು ತಡವರಿಸಿ ಗೊಣ್ಣೆ ಸುರಿಸುತ್ತಿದ್ದ ಗೋಪಾಲನ ಮೂಗು ಹಿಡಿದು ಕೆನ್ನೆಗೆ ಬಾರಿಸು ಎಂದು ಆರ್ಡರ್ ಮಾಡುವ ತನಕ ನಾನೆಂಥಾ ತಪ್ಪು ಮಾಡಿದೆ ಎಂಬ ಅರಿವಾಗಿರಲಿಲ್

ಕೃಷ್ಣ ಬಿಕರಿಯಾದ..

Image
ನನ್ನಿಷ್ಟದ ಕೃಷ್ಣ ಬಿಕರಿಯಾದ ಭಕ್ತಿ ವ್ಯಾಪಾರಕ್ಕೆ ರಂಗು ರಂಗಿನ ದೀಪವಿಲ್ಲಿ ಎಳೆ ಬತ್ತಿ ಹಣತೆಯಿಲ್ಲ ಢೋಲು, ಢಕ್ಕೆ, ತಮಟೆಯಲ್ಲಿ ಕೊಳಲು ಊದಿದರೆ ಕೇಳುವವರಿಲ್ಲ ಕೋಲ್ಮಿಂಚಿನಾಭರಣವಿದೆ ಬಾಯಿ ತುದಿಗೆ ಕದ್ದ ಬೆಣ್ಣೆಯಿಲ್ಲ ಗೋವು ಕಾಯುತ್ತಿದ್ದವನಿಗೆ ಇದೆಂಥಾ ದುಸ್ಥಿತಿ? ನನ್ನ ಕೃಷ್ಣ ಪುಟ್ಟ ಮೂರ್ತಿ ಅಹಂಕಾರದಿ ತಲೆಯೆತ್ತಿದವನಲ್ಲ ಕೈ ಚಾಚುತ್ತಿದ್ದುದು ಬೆಣ್ಣೆ ಮುದ್ದೆಗೆ ಮೂರು ಕಾಸಿನಾಸೆಗಲ್ಲ ದನದ ಹಿಂಡಲ್ಲಿ ಓಡಿದವನಿಗೆ ಧನದಾಹ ಹುಟ್ಟಿಸಿದವರಾರೋ? ರಾಧೆ, ರುಕ್ಮಿಣಿಯರ ಗೆದ್ದವನ ಹೆಸರಲ್ಲಿ ಪ್ರೇಮ ಮಂದಿರವಂತೆ, ಮೋಹ ಮಂದಿರವಂತೆ ಹೆಸರಷ್ಟೇ, ಇಲ್ಲಿ ಪ್ರೇಮವಿಲ್ಲ, ರಾಧೆಯಿಲ್ಲ, ರುಕ್ಮಿಣಿಯಿಲ್ಲ ಹುಡುಕಿದರೆ ಕೃಷ್ಣನೂ ಇಲ್ಲ… ಬೆಣ್ಣೆ ಕದ್ದ ತಪ್ಪಿಗೆ ಘೋರ ಅಪಮಾನ ಛೇ!! ಸಾಧುವಲ್ಲ.‌. ತುಂಟ ಮಾಧವನಿಗೆ ಗಾಂಭೀರ್ಯ ಸಲ್ಲ ಭಕ್ತಿ ವ್ಯಾಪಾರದ ಹಸಿವಿಗೆ ಕೃಷ್ಣ ಬಿಕರಿಯಾದ, ಅವನೊಟ್ಟಿಗೆ ರಾಧೆಯೂ - ಅನಾಸ್ಕ

ನನಗೆ ಅನ್ನಿಸಿದ್ದು...

Image
ಮೊನ್ನೆ ಮೊನ್ನೆ ತನಕ ಹೀರೋ ಆಗಿದ್ದ ಖಡಕ್ ಅಧಿಕಾರಿಯೊಬ್ಬರು ಸಡನ್ನಾಗಿ ವಿಲನ್ ಆಗ್ತಾರೆ... ರಾಜಕೀಯಕ್ಕೆ ಬಂದು ಹಾಳಾಗ್ಬಿಟ್ರು ಅಂತ ಬೈಸ್ಕೊಳ್ತಿದ್ದ ರಾಜಕಾರಣಿಯೊಬ್ಬರು ಇದ್ದಕ್ಕಿದ್ದಂತೆ ಮಾದರಿ ವ್ಯಕ್ತಿಯಾಗ್ತಾರೆ... ಆದರೆ, ಈ ಅಭಿಪ್ರಾಯಗಳೆಲ್ಲಾ ಎಷ್ಟು ದಿನದವರೆಗೆ ಇರ್ತಾವೆ? ಅವರ ಇನ್ನೊಂದು ನಿರ್ಧಾರ ನಮ್ಮ ವೈಯುಕ್ತಿಕ ನಿಲುವಿನೊಂದಿಗೆ ತಾಳೆಯಾಗುತ್ತಿಲ್ಲ ಅನ್ನಿಸೋವರೆಗೆ.. ಅಷ್ಟೇ, ಮತ್ತೆ ಉಲ್ಟಾಪಲ್ಟಾ. ಅವರು ಆ ಕ್ಷಣಕ್ಕೆ ತೋಚಿದಂತೆ ರಿಯಾಕ್ಟ್ ಮಾಡಿದ್ರೂ ಸಹ ನಾವು ಮಾತ್ರ ಅದನ್ನ ಸ್ಕ್ರಿಪ್ಟೆಡ್ ಅನ್ನೋ ಥರ ನೋಡ್ತೀವಿ, ಘಟನೆ ಕುರಿತು ಅವರು ಅಭಿಪ್ರಾಯ ವ್ಯಕ್ತಪಡಿಸುವ ಮೊದಲೇ ನಾವು ನಮಗೆ ಬೇಕಾದಂತೆ ತೀರ್ಪು ಕೊಡ್ತೀವಿ. ಒಬ್ಬ ಸಂಸದ - ನನಗೆ ರಾಜಕೀಯ ಭವಿಷ್ಯಕ್ಕಿಂತ ಧರ್ಮ ಮುಖ್ಯ ಅಂದಾಗ ನಾವು ಸಂಭ್ರಮಿಸೋದು ಎಷ್ಟರ ಮಟ್ಟಿಗೆ ಸಮಂಜಸ? ಅವರು ಆ ಕ್ಷಣಕ್ಕೆ ಭಾವೋದ್ವೇಗದಿಂದ ಆಡಿದ ಮಾತು ಮುಂದೆ ಬದಲಾಗಲೂಬಹುದು. ಅಂತೆಯೇ ಒಬ್ಬ ಪೊಲೀಸ್ ಅಧಿಕಾರಿ ಅದೂ ಸಹ ಯುವಕರ ಕಂಗಳಿಗೆ ಹೊಳಪನ್ನು ತುಂಬುವ ಶಕ್ತಿಯುಳ್ಳ ದಕ್ಷ ಅಧಿಕಾರಿ ಮೇಲಿನವರ ಆದೇಶವನ್ನು ಪಾಲಿಸಿದರೆ ನಮ್ಮ ಕಣ್ಣಿಗೆ ಧರ್ಮದ್ರೋಹಿಯಾಗೋದು ವಿಪರ್ಯಾಸ.. ಕಷ್ಟಪಟ್ಟು ಆ ಸ್ಥಾನಕ್ಕೆ ಏರಿದಾತನಿಗೆ ನಾವು ಕೊಡುವ ಮರ್ಯಾದೆಯಾ ಅದು? ಹೋಗಲಿ... ಒಬ್ಬ ಅಧಿಕಾರಿ ಒಂದು ಧರ್ಮದ ಪರವಾಗಿ ಇರಬೇಕು ಅಂತ ಅಂದುಕೊಳ್ಳೋದು ಸರಿಯಾ? ಈ ಸರ್ಕಾರಗಳು ತಮಗೆ ಬೇಕಾದಂತೆ ಆದೇಶ ಹೊರಡಿಸಿ ಜನ