Posts

Showing posts from June, 2016

ಕಟ್ಟುಮಸ್ತಾದ ಮೈಕಟ್ಟುಳ್ಳ ಸುಂದರ ಚಿತ್ರ

Image
                        ಜೀವನದ ಜಂಜಾಟದಲ್ಲಿ ಭಾವನೆ, ಸಂಬಂಧಗಳಿಗಿಂತ ಮುಖ್ಯವಾಗುವ ಕೆಲಸ, ಅಷ್ಟೋ ಇಷ್ಟೋ ದುಡ್ಡು ಕೊಟ್ಟು ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸಿ ತಮ್ಮ ಜವಾಬ್ಧಾರಿ ಮುಗಿಯಿತೆಂದು ಕೈ ತೊಳೆದುಕೊಳ್ಳುವ ಮಕ್ಕಳು, ಮಾನವೀಯತೆಯೇ ಕಾಣೆಯಾಗಿದೆ ಎಂದು ನಿಟ್ಟುಸಿರು ಬಿಡುವ ವೇಳೆಯಲ್ಲಿ ಕಾಣುವ ನಿಸ್ವಾರ್ಥ ಕೈಗಳು ಇವೆಲ್ಲವೂ ಪ್ರಸ್ತುತ ಸಮಾಜದಲ್ಲಿ ಪ್ರತಿನಿತ್ಯ ನಮಗೆ ಕಾಣಸಿಗುತ್ತವೆ, ಹೀಗೆ ಸಂಬಂಧಗಳು ಮಹತ್ವ ಕಳೆದುಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಸಂಬಂಧಗಳ ಪ್ರಾಮುಖ್ಯತೆಯನ್ನು ಕಥೆಯ ರೂಪದಲ್ಲಿ ತೆರೆದಿಡುತ್ತಾ ನೋಡುಗನಿಗೆ ಅದನ್ನು ಮನಮುಟ್ಟುವಂತೆ ನಿರೂಪಿಸುವಲ್ಲಿ "ಗೋಧಿ ಬಣ್ಣ ಸಾಧಾರಣ ಮೈಕಟ್ಟು" ಚಿತ್ರದ ನಿರ್ದೇಶಕ ಹೇಮಂತ್ ಯಶಸ್ವಿಯಾಗಿದ್ದಾರೆ. ಮರೆಗುಳಿ (Alzheimers) ಖಾಯಿಲೆಗೆ ತುತ್ತಾಗಿರುವ ಅಪ್ಪ ವೆಂಕೋಬ ರಾವ್, ಅಪ್ಪನಿಗಿಂತ ಕೆಲಸವೇ ಮುಖ್ಯವೆಂದು ಆ ಖಾಯಿಲೆ ಬಂದಿರುವವರನ್ನು ನೋಡಿಕೊಳ್ಳುವುದಕ್ಕಾಗಿಯೇ ಇರುವ ಒಂದು ಸಂಸ್ಥೆಗೆ ಅಪ್ಪನನ್ನು ಸೇರಿಸಿ ಹೊರಟು ಹೋಗುವ ಮಗ ಶಿವ, ಆತನಿಗೆ ಅಪ್ಪನ ಮೇಲೆ ಪ್ರೀತಿ - ಕಾಳಜಿ ಇಲ್ಲದಿದ್ದರೂ ಆಕಸ್ಮಿಕವಾಗಿ ಅಪ್ಪ ಕಳೆದುಹೋದಾಗ ಅವರನ್ನು ಹುಡುಕಲು ಶುರುಮಾಡುತ್ತಾನೆ, ಹುಡುಕಾಟದಲ್ಲಿ ವೆಂಕೋಬರನ್ನು ನೋಡಿಕೊಳ್ಳುತ್ತಿದ್ದ ಸಂಸ್ಥೆಯ ವೈದ್ಯೆ ಸಹನಾ ಅವನ ಜೊತೆಗೆ ಸೇರಿಕೊಳ್ಳುತ್ತಾರೆ, ಹುಡುಕಾಟದ ಸಂದರ್ಭದಲ್ಲಿ ಬಿಚ್ಚಿಕೊಳ್ಳುವ ಹೊಸ ಹೊಸ ಕ