Posts

Showing posts from March, 2018

ಇವನ ಪ್ರತಾಪಕ್ಕೆ ನಾನು ಹರಕೆ ಕುರಿ

Image
ಬದುಕು ಕಟ್ಟುವ ಕೆಲಸ ಆರಂಭ ಆಗೋದೇ ಪಿಯುಸಿ ಮುಗಿದ ಮೇಲೆ, ಅಲ್ಲಿಯ ತನಕ ನಮ್ಮ ಗುರಿಯ ಬಗ್ಗೆ ಅರಿವಿದ್ದರೂ, ಸಾಗುವ ದಾರಿಯ ಕುರಿತು ಸ್ಪಷ್ಟತೆ ಇರುವುದಿಲ್ಲ. ಆ ಸಮಯದಲ್ಲಿ ನಮ್ಮ ತೊಳಲಾಟಗಳನ್ನ ಆಲಿಸೋಕೆ ಒಂದೊಳ್ಳೇ ಸ್ನೇಹಮಯಿ ಜೀವದ ಅವಶ್ಯಕತೆ ಖಂಡಿತಾ ಇರುತ್ತದೆ. ಅಂತೆಯೇ ನನಗಿರುವ ಕೆಲವೇ ಕೆಲವು ಬೆರಳೆಣಿಕೆಯಷ್ಟು ಬೆಸ್ಟ್ ಫ್ರೆಂಡ್ಸ್ ಎಂಬುವವರಲ್ಲಿ ಇವನೂ ಒಬ್ಬ, ಹೆಸರು ಶಿವಪ್ರಸಾದ. ನನ್ನೆಲ್ಲಾ ಯಡವಟ್ಟುಗಳಿಗೂ ಸಾಕ್ಷ್ಯ ಹೊಂದಿದವ. ನಮ್ಮ ನಡುವೆ ಅರಿಷಡ್ವರ್ಗಗಳಿಂದ ಹಿಡಿದು ಅಂತರಾಷ್ಟ್ರೀಯ ಮಟ್ಟದ ತನಕವೂ ಚರ್ಚೆಗಳಾಗುತ್ತವೆ, ವಯಸ್ಸು ಒಂದೇ ಆಗಿದ್ದರಿಂದ ಹದಿಹರೆಯದ ರಾಮಾಯಣಗಳ ಕುರಿತು ತುಸು ಜಾಸ್ತಿಯೇ ಮಾತನಾಡುತ್ತೇವೆ. ಬೆಳಿಗ್ಗೆ ಸೂರ್ಯ ಏಳುವುದಕ್ಕೆ ಮೊದಲೇ ನನ್ನನ್ನೆಬ್ಬಿಸಿ ನಿದ್ದೆಗಣ್ಣಿನಲ್ಲೇ ಮೊಂಬತ್ತಿಯ ಮುಂದೆ ಕೂರಿಸಿ ಅವನದೇ ಕಲ್ಪನೆಯನ್ನಿಟ್ಟುಕೊಂಡು ಫೋಟೋ‌ ತೆಗೆಯುವ ಇವನ ಹುಚ್ಚಿಗೆ ನಾನು ಹರಕೆಯ ಕುರಿ. ಇವನು ಪ್ರೇಮಪತ್ರ ಬರೆದಾಗ ಅವರಮ್ಮ ಅನುಮಾನಿಸಿದ್ದರಂತೆ, ಆ ಅನುಮಾನ ನಿವಾರಿಸೋಕೆ ನನ್ನ ಅಷ್ಟೂ ಪ್ರೇಮಪತ್ರಗಳನ್ನ ಅವರ ಮುಂದಿಟ್ಟು ತನ್ನನ್ನು ತಾನು ಬಚಾವ್ ಮಾಡಿಕೊಂಡ ಕಿಡಿಗೇಡಿ. ಅತೀ ಮುಗ್ಧನಂತೆ ತನ್ನನ್ನು ತಾನು ಬಿಂಬಿಸಿಕೊಳ್ಳೋ ಇವನೊಳಗಿರುವ ಮಹಾನ್ ಕಿಲಾಡಿಯ ಪರಿಚಯ ನನಗಿರುವುದರಿಂದ ಹೆಚ್ಚಿಗೆ ಹೊಗಳಿ ಆತ್ಮಸಾಕ್ಷಿಗೆ ಮೋಸ ಮಾಡಿಕೊಳ್ಳೋಕೆ ತಯಾರಿಲ್ಲ. ಆದರೆ ಒಂದಂತೂ ಸತ್ಯ ನನಗರಿವಿಲ್ಲದಂತೇ ನನ್ನಲ್ಲಿ ಕೆಲ

ದಾರಿ ಯಾವುದಯ್ಯಾ.. ಲೈಫಿನ ದಾರಿ ಯಾವುದಯ್ಯಾ??

Image
                               ಸುವರ್ಣ ನ್ಯೂಸ್ ಚಾನೆಲ್ಲಲ್ಲಿ ಪ್ರೈಮ್ ಟೈಮ್ ಡಿಬೇಟ್ ನಡೆಸಿಕೊಡ್ಬೇಕು.. ನಮಸ್ಕಾರ ನೀವು ನೋಡ್ತಾ ಇದೀರಾ ಸುವರ್ಣ ನ್ಯೂಸ್ ನಾನು ಸ್ಕಂದ ಆಗುಂಬೆ ಅಂತ ಮಾತು ಶುರು ಮಾಡ್ಲಾ..? ಅಯ್ಯೋ ತುಂಬಾ ಹಳೇ ಸ್ಟೈಲ್ ಆಗೋಗಿರುತ್ತೆ ಅಷ್ಟ್ರಲ್ಲಿ.. ಸೋ‌ ಬೇರೆ ಥರ ಏನಾರ್ ಹುಡ್ಕ್ಬೇಕು. ಊಹ್ಞೂಂ ಬೇಡ.. ಆ ವಿಜಯಲಕ್ಷ್ಮಿ ಶಿಬರೂರು ಮೇಡಂಗೆ ಏನ್ ಧೈರ್ಯ ನೋಡು, ಅವ್ರ್ ಥರಾನೇ ಇನ್ವೆಸ್ಟಿಗೇಟಿವ್ ಜರ್ನಲಿಸಂ ಮಾಡ್ಬೇಕು. ಅದೂ ಬೇಡ ಪೇಪರ್ರೇ ಬೆಟರ್ರು ಸ್ವಲ್ಪ ಆದ್ರೂ ಎಥಿಕ್ಸ್ ಉಳ್ಕೊಂಡಿದೆ ಇಲ್ಲೇ ಇದ್ದು ಒಳ್ಳೇ ಹೆಸ್ರು ಮಾಡಣ. ಏಯ್ ರೆಡಿಯೋ ಟ್ರೈ ಮಾಡ್ಬೋದು.‌. ಆರ್ ಜೆ ಆದ್ರೆ ಹೆಂಗೆ..? ಅಥ್ವಾ ಎಂಟ್ರಟೈನ್ಮೆಂಟ್ ಚಾನೆಲ್ ಸೇರ್ಕೊಂಡ್ಬಿಡ್ಲಾ? ಧಾರಾವಾಹಿಗೆ ಸಂಭಾಷಣೆ ಬರ್ದ್ರೆ ಒಳ್ಳೇ ದುಡ್ ಬರುತ್ತಂತೆ ಅದ್ ಕೂಡ ಮಾಡ್ಬೇಕು..‌ ಜಯಂತ್ ಕಾಯ್ಕಿಣಿ ಥರ ಪದ್ಯ ಬರ್ಯೋದ್ ಕಲೀಬೇಕು.. ಒಳ್ಳೇ ಲೈಫು ಅಂದ್ರೆ ಈ ಲೆಕ್ಚರರ್ಸ್ಗಳದ್ದು ಒಳ್ಳೇ ಸ್ಯಾಲ್ರಿನೂ ಇರುತ್ತೆ, ಟೈಮೂ ಇರುತ್ತೆ.. ಅತ್ತೆ ಮಾವನತ್ರ ಹೋಗಿ ಹೆಣ್ ಕೇಳೋಕೆ ಒಂದ್ ಧೈರ್ಯನೂ ಇರತ್ತೆ.. ಉಸ್ತಾದ್ ಹೊಟೇಲ್ ಫಿಲಂ ನೋಡಿ ಮೆಡುಲಾ ಅಬ್ಲಾಂಗೇಟಾದಲ್ಲಿ ವೇರಿಯೇಷನ್ ಆಗಿದೆ ಒಂದ್ ಹೋಟ್ಲು ಇಟ್ ಬಿಡ್ಲಾ..? ಹೇಗೂ ಆಗುಂಬೆ ಪಕ್ದಲ್ಲೇ ಊರಿದೆ ಒಂದ್ ಹೋಂ ಸ್ಟೇ ಮಾಡಿದ್ರೆ ಹೆಂಗೆ..? ಒಂದ್ ಸ್ಕೂಲ್ ಮಾಡ್ಬೇಕು.. ಟ್ರಾವೆಲ್ ಏಜೆನ್ಸಿ ಮಾಡಿದ್ರೆ ಒಳ್ಳೇದು.. ಅದ್ರಲ್ ಲ