Posts

Showing posts from April, 2018

ಹುಲಿಮಾರ

Image
             "ದ್ಯಾವನಾಯ್ಕನ್ನ ಹುಲೀ ಹಿಡೀತಂತೆ, ನಿನ್ನೆ ರಾತ್ರಿ ಶಿಕಾರಿಗ್ ಹೋದೋನು ಬೆಳ್ಗಾದ್ರೂ ಬರ್ದೇ ಇರೋದನ್ ನೋಡಿ ಅವ್ನ್ ಮಗ ಮಾರ ಹುಡ್ಕಂಡ್ ಹೋದಾಗ ಆ ಹುಲಿಯಮ್ಮನ್ ದೇವಸ್ಥಾನದ್ ಎದ್ರಿರೋ ಹೆಬ್ಬಲಸಿನ ಮರದ್ ಕೆಳ್ಗೆ ಬಿದ್ದಿದ್ನಂತೆ, ಮಗ ಹುಟ್ಟಿದಾಗ ಹರಕೆ ತೀರ್ಸೋಕ್ ಹೋದೋನು, ಆಮೇಲ್ ಒಂದ್ ಕೋಳಿ ಬಲಿ ಕೂಡ ಕೊಟ್ಟಿಲ್ಲ, ದೇವ್ರ್ ಸುಮ್ನೆ ಬಿಡ್ತದಾ? ಅವ್ನನ್ನೇ ಬಲಿ ತಗಂಡಿದೆ ನೋಡಿ" ಏದುಸಿರು ಬಿಡುತ್ತಾ ಯಜಮಾನ ಸೀನಯ್ಯಂಗೆ ವರದಿ ಒಪ್ಪಿಸುತ್ತಿದ್ದ ಶಂಕ್ರ. ದ್ಯಾವನಾಯ್ಕ ಸೀನಯ್ಯನ ಮನೆಮಗನಂತೆ ಇದ್ದವನು, ಸುಮಾರು ಐವತ್ತರ ಆಸುಪಾಸಿನವನು. ಸಣ್ಣ ಹುಡುಗನಿರಬೇಕಾದರೆ ಮಂಗನ ಕಾಯಿಲೆ ಬಂದು ಅವನ ಅಪ್ಪ, ಅಮ್ಮ ಸತ್ತ ಲಾಗಾಯ್ತು ಇವನನ್ನು ಸಾಕಿ, ಬೆಳೆಸಿ, ಮದುವೆ ಮಾಡಿಸುವ ತನಕವೂ ಮನೆಯಲ್ಲೇ ಇಟ್ಟುಕೊಂಡಿದ್ದರು ಸೀನಯ್ಯ. ಅವನದ್ದೂ ಒಂದು ಸಂಸಾರವೆಂದು ಶುರುವಾದ ಮೇಲೆ ತಮ್ಮ ಮನೆ ಬಳಿಯೇ ಒಂದು ಜಾಗ ಗೊತ್ತು ಮಾಡಿ ಚಿಕ್ಕ ಸೂರನ್ನೂ ಕಟ್ಟಿಕೊಟ್ಟಿದ್ದರು. ಹೀಗೆ ಮನೆ ಮಗನಂತೆ ಬೆಳೆದ ದ್ಯಾವನಾಯ್ಕ ಸತ್ತನೆಂದಾಗ ಸೀನಯ್ಯನಿಗೆ ಕಣ್ಣು ಕತ್ತಲೆಗಟ್ಟಿದಂತಾಗಿತ್ತು. ಅಮ್ಮೋರೇ.. ಸೀನಯ್ಯಂಗ್ ತಲೆ ಸುತ್ ಬಂದಿದೆ ನೀರ್ ತಗಂಬನ್ನಿ ಬೇಗ ಎಂದು ಶಂಕ್ರ ಕೂಗಿದ ತಕ್ಷಣ ಒಳಗಿನಿಂದ ಓಡಿಬಂದ ಮೂಕಮ್ಮ ಗಂಡನಿಗೆ ನೀರು ಕುಡಿಸಿ, ಎದೆಯುಜ್ಜುತ್ತಾ ಶಿವ್ನೇ ಏನಾಯ್ತಪ್ಪಾ ಎಂದು ಗಲಿಬಿಲಿಗೊಳ್ಳಲು, ಶಂಕ್ರ ಸಾವಧಾನವಾಗಿ ನಡೆದಿದ್ದನ್ನೆಲ್ಲಾ ವಿವರ