Posts

Showing posts from November, 2017

ಹರೆಯದ ನದಿ ಸುಗಮವಾಗಿ ಹರಿಯಲಿ..

Image
ಹೊರಗೆಲ್ಲೋ ಸುತ್ತಾಡಿ ಮನೆಗೆ ಬಂದು ಕೂತಿರುತ್ತಾನಷ್ಟೇ. "ಎಲ್ ಹೋಗಿದ್ದಿ? ಹೋಗೋಕ್ ಮುಂಚೆ ಒಂದ್ ಮಾತ್ ಹೇಳಿ ಹೋಗೋಕಾಗಲ್ವಾ? ಸುಸ್ತಾಗಿದೆ ಅನ್ಸುತ್ತೆ.. ಫ್ರೆಶ್ ಆಗು, ತಿನ್ನೋಕ್ ಏನಾರ್ ಕೊಡ್ತೀನಿ.." ಅಂತ ತುಸು ಸಿಡುಕುತ್ತಲೇ ಪ್ರೀತಿ ತೋರುತ್ತಾಳೆ ಅಮ್ಮ. ಆಕೆ ಒಳಗೆ ಹೋಗಿ ಹತ್ತು ನಿಮಿಷವಾದರೂ ಈತ ಕುಳಿತಲ್ಲಿಂದ ಎದ್ದಿರುವುದಿಲ್ಲ, ಮತ್ತೆ ಕರೆಯುತ್ತಾಳೆ. ಉತ್ತರ ಬಾರದಿದ್ದನ್ನು ನೋಡಿ ಬೈಯುತ್ತಲೇ ಧಾವಿಸಿದವಳಿಗೆ, ಅಷ್ಟೊತ್ತು ಮೊಬೈಲ್ ನೋಡುತ್ತಾ ಮುಗುಳ್ನಗುತ್ತಿದ್ದ ಮಗ ತಾನು ಬಂದ ಕೂಡಲೇ ಸ್ಕ್ರೀನ್ ಆಫ್ ಮಾಡಿದ್ದನ್ನು ಕಂಡು ಸಣ್ಣಗೆ ಅನುಮಾನ! ಬಾಯ್ಬಿಟ್ಟು ಕೇಳುವುದಿಲ್ಲ, ಸುಮ್ಮನೇ ಗಮನಿಸುತ್ತಾಳೆ. ಸಾಲದ್ದಕ್ಕೆ ಅನುಮಾನಗಳಿಗೆ ಪುಷ್ಟಿ ಕೊಡುವಂತೆ ಮಗನ ನಡವಳಿಕೆಯಲ್ಲಿ ಸಣ್ಣಪುಟ್ಟ ಬದಲಾವಣೆ ಕಾಣುತ್ತಲೇ ಇರುತ್ತದೆ. ಮೊನ್ನೆ ಮೊನ್ನೆ ತಾನೇ ಪಿಯುಸಿ ಮುಗಿಸಿ ಡಿಗ್ರಿ ಜೀವನಕ್ಕೆ ಕಾಲಿಟ್ಟ ಮಗ ದೊಡ್ಡವನಂತೆ ವರ್ತಿಸಲು ಆರಂಭಿಸುತ್ತಾನೆ, ಸ್ಕೂಲಿಗೆ ಹೋಗುತ್ತಿದ್ದಾಗ ಟಿವಿ ನೋಡೋಕೂ ಪರ್ಮಿಶನ್ ಕೇಳುತ್ತಿದ್ದವನು ಈಗ ಅದೆಲ್ಲಿಗೆ ಹೋಗುವುದಾದರೂ ಹೇಳುವುದಿಲ್ಲ. ರಾತ್ರಿ ಹನ್ನೆರಡಾದರೂ ಮೊಬೈಲ್‍ನಲ್ಲೇ ಮುಳುಗಿರುತ್ತಾನೆ. ಕಾರಣವೇ ಇಲ್ಲದೆ ಸಿಡುಕುತ್ತಾನೆ, ಕಾರಣ ಕೇಳಿದರೆ ಸ್ವಲ್ಪ ಸುಮ್ನಿರು ಮಾರಾಯ್ತಿ ಅಂತ ಮುಖ ತಿರುಗಿಸುತ್ತಾನೆ. ಅರೆ!! ಇವನಿಗೇನಾಯಿತು, ಲವ್ವು? ಫ್ರೆಂಡ್ಸ್ ಸಹವಾಸ? ಸಿಗರೇಟು? ಡ್ರಗ್ಸ್? ಅಯ್ಯೋ.

ಊಹಾರೇಖೆ

Image
ನವಜಾತ ತಂಗಾಳಿ ಹೊಕ್ಕುಳ ಬಳ್ಳಿ ಸಡಿಲಿಸಿ ದಿಕ್ಕು ದೆಸೆಯಿಲ್ಲದೆ ಬೀದಿಗಿಳಿಯುತ್ತದೆ.. ಅಪ್ರಾಪ್ತ ಇರುಳಿಗೆ ರಾತ್ರಿಯಿಡೀ ಉರಿವ ಹುಣ್ಣಿಮೆ ಚಂದ್ರಮನ ಮೇಲೆ ಹುಸಿಗೋಪ.. ಚಡಪಡಿಸುತ್ತೇನೆ.. ಮೆದು ಪಾದದ ಹುಡುಗಿ ಎದೆ ತುಳಿಯುತ್ತಾಳೆ ಊಹಾರೇಖೆಗಳ ರಂಗೋಲಿ ಉದರದಂಗಳದಲ್ಲಿ.‌. ಬಿಳಿರಾತ್ರಿ ಬಿಳಿಚಿಕೊಳ್ಳಲು ಹುಡುಗಿ ಹೊರಡುತ್ತಾಳೆ ಚೆಂಗೆದ್ದು ಕುಣಿದ ಸ್ವಪ್ನ ಸುಸ್ತುಗೊಳ್ಳುತ್ತದೆ.. ಮತ್ತೆ ಚಡಪಡಿಸುತ್ತೇನೆ.‌‌. ಸ್ವಯಂಕೃತ ಅಪರಾಧಕ್ಕೆ ಕ್ಷಮೆಯಾಚಿಸಿಕೊಂಡು ಆತ್ಮಾವಲೋಕಿಸಿ ಕ್ಷಮಿಸಿಕೊಳ್ಳುತ್ತೇನೆ ಅಸ್ವಸ್ಥ ಕನಸಿಗಾಗಿ ಕೂತು ಕೊರಗುತ್ತೇನೆ ಸುಡುವ ನೆನಪು ಅಳೆಯಲು ಯಾವ ಮಾಪಕ? - ಅನಾಸ್ಕ

ಮುದ್ದು ಜೀವಗಳಿಗೆ ಹ್ಯಾಪಿ ಬರ್ತ್ ಡೇ 😘

Image
ಸಂಬಂಧಗಳಿಗೆ ತೀರಾ ನಿರ್ಬಂಧ ಹೇರಿ.. ಟೈಂ ಟೇಬಲ್‌ ಹಾಕಿ ಶಿಸ್ತುಬದ್ಧ ಮಾಡೋಕ್ ಹೋಗ್ಬಾರ್ದು, ಅವುಗಳ ಪಾಡಿಗೆ ಸ್ವತಂತ್ರವಾಗಿರೋಕೆ ಬಿಟ್ಟುಬಿಡಬೇಕು, ನಿಜವಾಗಿಯೂ ಸೆಳೆತ ಇದ್ದಿದ್ದೇ ಹೌದಾದರೆ ಅವು ಎಲ್ಲೇ ಹೋದರೂ ದೂರಾಗುವುದಿಲ್ಲ, ಎಂದೋ ಯಾವುದೋ ಬಿಂದುವಿನಲ್ಲಿ ಸಂಧಿಸುವುದು ಖಚಿತ. ಕರುಳಿಗೆ ನೈಜ ಸಂಬಂಧಗಳನ್ನು ಹಿಡಿದಿಟ್ಟುಕೊಳ್ಳೋ ತಾಕತ್ತು ಇದ್ದೇ ಇರುತ್ತೆ.. ಈ ನವೆಂಬರ್ ನಾಲ್ಕು ಅನ್ನೋದೇ ಹುಣ್ಣಿಮೆ ಬೆಳದಿಂಗಳಿದ್ದಂತೆ, ಸಾಲದ್ದಕ್ಕೆ ಇವತ್ತು ಅಸಲಿ ಪೌರ್ಣಿಮೆ, ಅದೇ ಖುಷಿಯಲ್ಲಿ ಒಂದಷ್ಟ್ ಸಾಲುಗಳನ್ನ ಗೀಚ್ತಿದ್ದೀನಿ.. ಸಹಿಸಿಕೊಳ್ಳಿ - ಒಡಹುಟ್ಟಿದವಳು.. ತೀರಾ ಒದ್ದಾಡಿ ಬದುಕಿದ ಕೂಸು ಅದು. ಏಳು ತಿಂಗಳಿಗೆ ಹುಟ್ಟಿ, ಏಳು ಜನ್ಮಕ್ಕಾಗುವಷ್ಟು ಸಂಕಟಪಟ್ಟಿರಬಹುದು. ಹುಟ್ಟಿ ಹೆಚ್ಚೂ ಕಡಿಮೆ ಹದಿನೈದು ದಿನಗಳಾದ ಮೇಲೆ ತಂಗಿಯ ಮುಖ ನೋಡಿದ್ದು ನಾನು. ಅವ್ಳು ಶಾಲೆಗ್ ಸೇರೋಷ್ಟ್ರಲ್ಲಿ ನಾನು ಹಾಸ್ಟೆಲ್ ಸೇರಿದೆ, ಸರಿಸುಮಾರು ಆರು ವರ್ಷವಾಯ್ತು ಅವಳೊಟ್ಟಿಗೆ ಹೆಚ್ಚು ಕಾಲ ಕಳೆಯದೆ. ಮನೆಗ್ ಹೋದಾಗ ಜಗಳ - ಹೊಡೆದಾಟಕ್ಕೇ ಟೈಂ ಸಾಕಾಗಲ್ಲ, ಇನ್ನು ಕೂತ್ಕೊಂಡ್ ಮಾತಾಡೋದ್ ಎಲ್ಲಿ? 😉 ಮನೆಗ್ ದಿನಾ ಫೋನ್ ಮಾಡಿ ಅರ್ಧರ್ಧ ಗಂಟೆ ಮಾತಾಡಿದ್ರೂ ಅವ್ಳತ್ರ ಮಾತಾಡೋದ್ ಕಮ್ಮಿನೇ. ಅವ್ಳ ಕತೆಗಳಿಗೂ ನಮ್ಮ ಕತೆಗಳಿಗೂ ಅಜಗಜಾಂತರ ವ್ಯತ್ಯಾಸ ಇರೋದ್ರಿಂದ ಪರಸ್ಪರ ಹಂಚಿಕೊಳ್ಳೋಕೂ ಆಗಲ್ಲ 😂😂 ಆದ್ರೂ ಅದೊಂಥರಾ ಮುದ್ಮುದ್ದು ಜೀವ, ನಾ ಕೊಡೋ ಅತೀ ಚ

ಗುಳಿ ಬೀಳದ ನಿನ್ನ ತುಂಬುಗೆನ್ನೆಗೆ ಮುತ್ತಿಡುವ ಆಸೆ ಚಿರಾಯು...

Image
ಕೂಸುಮರೀ..                    ಬೆಳದಿಂಗಳಿನಿಂದ ವಂಚಿತವಾದ ರಾತ್ರಿಯೊಂದು ಚಂದ್ರಮನ ತಂಪಿಗೆ ಹಂಬಲಿಸುವಂತೆ, ಅನಾಮಿಕ ಕಡಲಿನ ಭೋರ್ಗರೆತಕ್ಕೆ ಓಗೊಟ್ಟು ಮೈಲಿಗಟ್ಟಲೆ ಸಾಗಿ ಸೇರಲು ಪರಿತಪಿಸುವ ನದಿಯಂತೆ ಮನವೀಗ ನಿನ್ನ ಧ್ಯಾನದಲ್ಲಿದೆ. ಹಳವಂಡದ ಬದುಕಿಗೆ ಸಿಕ್ಕು ಜಡಗಟ್ಟಿರುವ ಭಾವನೆಗಳಿಗೆ ಮೃದು ಸ್ಪರ್ಶ ಬೇಕಿದೆ. ಸುತ್ತಲಿನ ಜಗದ ಕೌತುಕಗಳನ್ನೆಲ್ಲಾ ಮರೆಮಾಚುವಂತಹ ನಿನ್ನ ಕಾಡುವಿಕೆಯ ಗಾಢತೆ ಬದುಕಿನ ಮತ್ತೊಂದು ಮಜಲನ್ನು ಮುಖ್ಯ ವೇದಿಕೆಗೆ ಕರೆತಂದು ಕೂರಿಸಿದೆ. ನಿನ್ನ ಮೌನವನ್ನು ಅಧ್ಯಾಪಿಸುವ ನನ್ನೆಲ್ಲಾ ಯೋಜನೆಗಳು ತಲೆಕೆಳಗಾಗಿರುವ ಹೊತ್ತಿನಲ್ಲಿ ಭಾವನೆಗಳೆಲ್ಲಾ ಹಾಳೆಗೆ ಬೀಳುತ್ತಿವೆ. ಮಾಮೂಲಿ ಪದಗುಚ್ಛಗಳೆಲ್ಲಾ ನಿನ್ನ ವರ್ಣಿಸುವ ಪ್ರಯತ್ನದಲ್ಲಿ ಸೋತು ಬಿದ್ದಮೇಲೆ, ಇದೆಂಥದ್ದೋ ವಿಚಿತ್ರ ಶೈಲಿಯೊಂದು ಹುಟ್ಟಿಕೊಂಡಿದೆ. ಚಂದದ ಪದಗಳನ್ನೆಲ್ಲಾ ಹೆಕ್ಕಿ ತಂದು ಅದರಲ್ಲೇ ನಿನ್ನ ಮುದ್ದಾಡುವಾಸೆ, ಸದ್ಯಕ್ಕೀಗ ಪದಗಳ ಹುಡುಕಾಟದಲ್ಲಿದ್ದೇನೆ.. ಸಹಕರಿಸು, ಸ್ವೀಕರಿಸು.                     ಹರೆಯದ ದೋಣಿ ಶುರುವಿನಲ್ಲೇ ಮಗುಚಿ ಬೀಳುವಂತಹಾ ಸೆಳೆತ ಸೃಷ್ಟಿಸಿದ್ದ ನಿನ್ನ ತುಂಟುತನದ ಅಲೆಯೀಗ ಶಾಂತವಾಗಿದ್ದೇಕೆ? ಹರೆಯವೀಗ ತನ್ನ ಪರಮಾವಧಿಗೆ ಸಾಮಿಪ್ಯವಾಗುತ್ತಾ, ತಟ ಸೇರುವ ಬದಲು ಮತ್ತೆ ಮಗುಚಿ ಬೀಳಲು ಹಪಹಪಿಸುತ್ತಿದೆ, ಸೂಚನೆಯಿಲ್ಲದೇ! ಅಲೆಯೆಬ್ಬಿಸಿಬಿಡು ಮತ್ತೆ ನಿನ್ನಲ್ಲಿ ಮುಳುಗುವೆ. ಸಾವರಿಸಿಕೊಳ್ಳುವ ಮುನ್ನವೇ ಆವರಿಸಿಬಿ

ಕನ್ನಡ ಟಂಗ್ ಟ್ವಿಸ್ಟರ್

೬೨ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಪ್ರಜಾವಾಣಿ ದಿನಪತ್ರಿಕೆ ಏರ್ಪಡಿಸಿದ್ದ, ಕನ್ನಡ ಟಂಗ್ ಟ್ವಿಸ್ಟರ್ ಚಾಲೆಂಜ್ ವೀಡಿಯೋ ಇದಾಗಿದ್ದು, ಪ್ರಜಾವಾಣಿ ಅಂತರ್ಜಾಲ ಪುಟದಲ್ಲಿ ಪ್ರಕಟಗೊಂಡಿದೆ. ವೀಡಿಯೋದಲ್ಲಿ ಸ್ಕಂದ ಹಸ್ಸೀಮನೆ ಎಂದು ತಪ್ಪಾಗಿದ್ದು ಅದು ಸ್ಕಂದ ಅಸೀಮನೆ ಆಗಬೇಕಿತ್ತು.