Posts

Showing posts from 2016

ಅನರ್ಥಗಳ ಮಾಲೀಕ

Image
ಪೌರ್ಣಿಮೆಯ ಬರುವಿಕೆಗಾಗಿ ಅಮವಾಸ್ಯೆಯ ಇಳಿಸಂಜೆಯಿಂದಲೇ ಆಗಸದಡಿಯಲ್ಲಿ ರಚ್ಚೆಹಿಡಿದು ಕುಳಿತು ಹದಿನಾಲ್ಕನೇ ದಿನಕ್ಕೆ ಸೋಲೊಪ್ಪಿಕೊಳ್ಳುವ ಹುಚ್ಚುಹುಡುಗ ನಾನು. ಭ್ರಮೆಯೊಳಗಿನ ವಾಸ್ತವತೆಯಲ್ಲಿ ಬದುಕು ಕಟ್ಟಿಕೊಳ್ಳಲು ಕನಸು ಕಾಣುವುದರಲ್ಲೇ ಸುಖವನ್ನರಸುವ ಚಾಳಿಗೆ ಬಲಿಯಾದ ಬಡಜೀವಿ ನಾನು. ಅರ್ಥವಿಲ್ಲದ ಸಾಲುಗಳನ್ನು ಒಂದಕ್ಕೊಂದು ಕಟ್ಟುತ್ತಾ ಸಾಕೆನಿಸಿದಾಗ ನಿಟ್ಟುಸಿರಿಟ್ಟು ಅದರೊಳಗೊಂದು ಕವಿತೆ ಹುಡುಕುವ ಸಾಹಸಿಗ ನಾನು. ಬೆಳಕಿನ ಕೋಣೆಯೊಳಗೆ ಕಪ್ಪು ದೀಪವನ್ನಿಟ್ಟು ಬೆಳಕಿನ ಅಹಂಕಾರವ ಕರಗಿಸಲು ವ್ಯರ್ಥ ಪ್ರಯತ್ನದೊಳು ಮುಳುಗುವ ಹಠಮಾರಿ ನಾನು. ನನ್ನದೊಂದು ಅರ್ಥವಿಲ್ಲದ ಬದುಕು ಬೊಗಸೆ ಪ್ರೀತಿಗೆ ಕರಗುತ್ತಾ ನನ್ನ ಅಸ್ತಿತ್ವವನ್ನೇ ಮರೆತು ಇನ್ನೊಬ್ಬರಿಗಾಗಿ ನಗುವ ಅನರ್ಥಗಳ ಮಾಲೀಕ ನಾನು. ನನಗಾಗಿ ಕಾಯಬೇಡ ಬದುಕು ಬಾಡುವ ಮುನ್ನ ಹೊಸ ಕನಸುಗಳನ್ನು ಹೆತ್ತು ನನ್ನೆದೆಗೊಮ್ಮೆ ಒದ್ದು ಹೊರಟು ಬಿಡು ಅವಮಾನಕ್ಕೆ ಅರ್ಹನಾದವನು ನಾನು. -ಅನಾಸ್ಕ

ಮೊದಲ ಹಂತದ ಪ್ರೀತಿ...

Image
ಮೊದಲ ಹಂತದ ಪ್ರೀತಿ.. ಲವಲವಿಕೆ, ಉತ್ಸಾಹ.. ಇಬ್ಬರೂ ಎಕ್ಸೈಟು.. ಲವ್ ಅಟ್ ಫಸ್ಟ್ ಸೈಟು. ಗಂಟೆಗಟ್ಟಲೆ ಮಾತು.. ಹೈಕು, ವಾಟ್ಸಾಪು.. ಅದರಲ್ಲೇ ಲವ್ವಿಂಗು.. ಅದರೊಳಗೇ ಲಿವ್ವಿಂಗು. ತಲೆಹರಟೆ ಹುಡುಗ.. ವಿಚಿತ್ರ ಆಸೆಗಳ ಓನರ್ರು.. ಡೀಸೆಂಟು ಹುಡುಗಿ.. ಹದಿನೆಂಟಾಗದ ಮೈನರ್ರು. ಬೈಬೇಕು ಅವಳು.. ಹೊಡಿಬೇಕು, ಬಡಿಬೇಕು.. ಕ್ಷಣಕ್ಷಣಕೂ ಸಿಡುಕಿದರೆ.. ಇನ್ನೂ ಒಳ್ಳೆಯದು. ಕೇಳಬಾರದು ಸಾರಿ.. ಬಿಡಬೇಕು ಮಾತುಕತೆ.. ಹುಸಿ ಮುನಿಸು ಮುಗಿದಾಗ.. ಗುನುಗಬೇಕು ಲವ್ ಯೂ. ಪಾಪ!! ಹೊಸದು ಪ್ರೀತಿ.. ಆಗಿಲ್ಲ ಅನುಭವ.. ಮಾಡಿದ್ದೆಲ್ಲಾ ಚೆಂದ.. ಏನೇನೋ ಹುಚ್ಚು ಆಸೆ. ಹುಡುಗಿ ಪಾಪದ ಜೀವ.. ಬರೀ ಮಾತಿನ ಮಲ್ಲಿ.. ಕಡಿಮೆ ಕಾಮನ್ ಸೆನ್ಸು.. ಸ್ಟುಡೆಂಟ್ ಆಫ್ ಸೈನ್ಸು. ಈ ಕ್ಷಣಕೆ ಲವ್ವು.. ಇನ್ನೊಮ್ಮೆಗೆ ಫ್ರೆಂಡ್ಶಿಪ್ಪು.. ಮೂಡಿಲ್ಲ ಕ್ಲಾರಿಟಿ.. ಕನ್ಫ್ಯೂಶನ್ ಪಾರ್ಟಿ. ಕುಲವೊಂದೇ, ಕ್ಯಾಸ್ಟೊಂದೇ.. ಸಬ್ ಡಿವಿಷನ್ ಬೇರೆ.. ಅದೇ ದೊಡ್ಡ ಪ್ರಾಬ್ಲಮ್ಮು.. ಮುಂದೆ ಮದುವೆಗೆ. ಒಪ್ಪುವುದು ಮ್ಯಾಟ್ರಲ್ಲ.. ಉಳಿಸಿಕೊಳ್ಳುವುದೇ ಚಾಲೆಂಜು.. ಸಕ್ಸಸ್ ಆಗದ ಪ್ರೀತಿಯ.. ಶುರು ಮಾಡುವುದೇಕೆ? ಹಚ್ಚಿದಳು ಹುಡುಗಿ ಆನೆಪಟಾಕಿ.. ದಂಗಾದ ಹುಡುಗ ಹೊಸವರಸೆ ನೋಡಿ.. ಹಣೆಬರಹ ಸರಿಯಿಲ್ಲ, ಕ್ಯಾಲೆಂಡರ್ ನೋಡಿದ.. ಎದ್ದು ಕಾಣುತ್ತಿತ್ತು ಏಪ್ರಿಲ್ ಒಂದು. -ಅನಾಸ್ಕ

ಅಗ್ನಿ ಮೂಲೆಯ ಕೋಣೆ..

Image
ಅಗ್ನಿ ಮೂಲೆಯ ಕೋಣೆ.. ಬಾಗಿಲಿಗೆ ಹಳೆಬೀಗ.. ಕ್ವಿಂಟಲ್ಲು ಧೂಳು, ಜೊತೆಗಷ್ಟು ತುಕ್ಕು.. ಒಡೆದು ನುಗ್ಗಿದ ಠಕ್ಕ.. ಹುಡುಕುತ್ತ ವರಹಗಳ. ಒಳಗೆ ಮರದ ಟ್ರಂಕು.. ಅದರೊಳಗೆ ಬಿಳಿಪೇಜು.. ಅರ್ಥವಾಗದ ಬರಹ.. ನಡುನಡುವೆ ಶಾಹಿ ಕಲೆ.. ಕೊನೆಗೊಂದು ಪ್ರೇಮಪತಾಕೆ. ಓದಿದ್ದೊಂದೇ ವರ್ಷ ಬಾಲವಾಡಿಯಲ್ಲಿ.. ಆಮೇಲೆ ಸುತ್ತಿದ್ದು ಮನೆಹಿಂದಿನ ಬ್ಯಾಣ.. ಆಗಿದ್ದು ಮಾತ್ರ ಚೋರವಿದ್ಯಾ ಪ್ರವೀಣ.. ತಲೆಕೆಡಿಸಿಕೊಂಡ ಬಿಳಿ ಪೇಜನು ನೋಡಿ.. ಇರಬಹುದೇ ಇದು ಆಸ್ತಿ ಪತ್ರ ಎಂದು. ನೆನಪಾಯಿತು ಹತ್ತರ ನೋಟು.. ಒಂದುದ್ದ ಗೆರೆ ಪಕ್ಕಕ್ಕೆ ಕೋಳಿಮೊಟ್ಟೆ.. ತಡಕಾಡಿದ ಕಳ್ಳ ಗೆರೆ-ಮೊಟ್ಟೆಗಳಿಗಾಗಿ.. ಮೊಟ್ಟೆಗಳ ರಾಶಿ ಎದುರಾಯಿತು ಕಣ್ಗೆ.. ಕಂಡ ಗೆರೆಗಳು ಮಾತ್ರ ಸೊನ್ನೆ ಸೊನ್ನೆ.. ಇರಬೇಕು ಪತ್ರದಲಿ ಒಂದಾದರು ನಂಬರು.. ಇರದಿರೇ ಅದೆಂಥಾ ಆಸ್ತಿಪತ್ರ..? ತಲೆ ಓಡಿಸಿದ ಚೋರ ಪ್ರವೀಣ.. ಮತ್ತೆ ಹಾಳೆಯ ತೆಗೆದು ನೋಡೇಬಿಟ್ಟ.. ವ್ಹಾ.. ಕೊನೆಯಲ್ಲಿ ಕಂಡಿತು ಗೆರೆ ಮತ್ತು ಮೊಟ್ಟೆ. ಕುಣಿದು ಕುಪ್ಪಳಿಸಿದ, ಚೀಟಿಯ ಮಡಚಿದ.. ಹರಕು ಜೇಬಿಗೆ ತುರುಕಿ ಹುಚ್ಚೆದ್ದು ಓಡಿದ.. ದಾರಿಯಲಿ ಎದುರಾದ ಪ್ರಾಣಸ್ನೇಹಿತ.. ಒಂದನೇ ಕ್ಲಾಸಿಗೆ ಇಸ್ಕೂಲು ಬಿಟ್ಟವ.. ಕಳ್ಳನ ಕಾಲಿಗೆ ಬಿತ್ತು ಗಕ್ಕನೆ ಬ್ರೇಕು.. ಪಟಪಟನೆ ಒದರಿದ, ಕಿವಿಗಷ್ಟು ಮೊಳೆಹೊಡೆದ.. ಅಪ್ಪಿ, ಎಳೆದಾಡಿ ಕೈಹಿಡಿದು ಕುಣಿದ.. ಕೊನೆಗೂ ಚೀಟಿಯ ತೆಗೆದು ಸ್ನೇಹಿತನ ಕೈಗಿತ್ತ.. ಕೋಟ

ಹೆಚ್ಚೇನು ಆಸೆಯಿಲ್ಲ...

Image
ಹೆಚ್ಚೇನು ಆಸೆಯಿಲ್ಲ... ತಲೆಗೂದಲು ಹಣ್ಣಾಗಿ.. ನಡು ಪೂರ್ಣ ಬೆಂಡಾಗಿ.. ಬೊಚ್ಚು ಬಾಯಿಂದ ನಾ ನಗುವಾಗ.. ನೀ ನಗಬೇಕು, ಯೌವ್ವನದಲ್ಲಿ ನಿನ್ನ ಕಾಡಿದ ಕ್ಷಣಗಳನ್ನೆಲ್ಲ ಮೆಲುಕಬೇಕು. ಮುಡಿಗಿಟ್ಟ ಮಲ್ಲಿಗೆ.. ಕೆನ್ನೆ ಇಳಿಜಾರಿನ ಮುತ್ತು.. ಹುಸಿಕೋಪ ಬಿರುನೋಟ.. ಎಲ್ಲ ನೆನಪಿಸಬೇಕು.. ಸಾಯುವ ಮುನ್ನ ಹುಡುಗನಾಗಬೇಕು, ನಿನ್ನ ನೋಟಕೆ ಪೂರ್ತಿ ಕರಗಬೇಕು. ಮತ್ತೆ ಹಂಬಲಿಸಬೇಕು.. ಪ್ರೀತಿಸಲು, ರಮಿಸಲು, ನಿನ್ನೊಡನೆ ಬದುಕಲು.. ನನ್ನ ಹಾತೊರೆಕೆಗೆ ನೀ ಕಡಿವಾಣ ಹಾಕಬೇಕು.. ಕಳಿಸಿಕೊಡಬೇಕು.. ದೇಹ ತಣಿಯುವ ಮುನ್ನ ಎದೆ ಮೇಲೆ ಕೈಯಿಟ್ಟು ಮನಸಾರೆ ಮುತ್ತಿಟ್ಟು ನನ್ನ ಕಳಿಸಿಕೊಡಬೇಕು. ಹೆಚ್ಚೇನು ಆಸೆಯಿಲ್ಲ... ನನ್ನ ಕೊನೆಯುಸಿರು ನಿನ್ನ ಸಾನಿಧ್ಯವ ಬಯಸಿದೆ... -ಅನಾಸ್ಕ

ಓದುಗರ ಸಂಪಾದಕೀಯ - ಕನ್ನಡಪ್ರಭ

Image
13/09/2016

ಕಟ್ಟುಮಸ್ತಾದ ಮೈಕಟ್ಟುಳ್ಳ ಸುಂದರ ಚಿತ್ರ

Image
                        ಜೀವನದ ಜಂಜಾಟದಲ್ಲಿ ಭಾವನೆ, ಸಂಬಂಧಗಳಿಗಿಂತ ಮುಖ್ಯವಾಗುವ ಕೆಲಸ, ಅಷ್ಟೋ ಇಷ್ಟೋ ದುಡ್ಡು ಕೊಟ್ಟು ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸಿ ತಮ್ಮ ಜವಾಬ್ಧಾರಿ ಮುಗಿಯಿತೆಂದು ಕೈ ತೊಳೆದುಕೊಳ್ಳುವ ಮಕ್ಕಳು, ಮಾನವೀಯತೆಯೇ ಕಾಣೆಯಾಗಿದೆ ಎಂದು ನಿಟ್ಟುಸಿರು ಬಿಡುವ ವೇಳೆಯಲ್ಲಿ ಕಾಣುವ ನಿಸ್ವಾರ್ಥ ಕೈಗಳು ಇವೆಲ್ಲವೂ ಪ್ರಸ್ತುತ ಸಮಾಜದಲ್ಲಿ ಪ್ರತಿನಿತ್ಯ ನಮಗೆ ಕಾಣಸಿಗುತ್ತವೆ, ಹೀಗೆ ಸಂಬಂಧಗಳು ಮಹತ್ವ ಕಳೆದುಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಸಂಬಂಧಗಳ ಪ್ರಾಮುಖ್ಯತೆಯನ್ನು ಕಥೆಯ ರೂಪದಲ್ಲಿ ತೆರೆದಿಡುತ್ತಾ ನೋಡುಗನಿಗೆ ಅದನ್ನು ಮನಮುಟ್ಟುವಂತೆ ನಿರೂಪಿಸುವಲ್ಲಿ "ಗೋಧಿ ಬಣ್ಣ ಸಾಧಾರಣ ಮೈಕಟ್ಟು" ಚಿತ್ರದ ನಿರ್ದೇಶಕ ಹೇಮಂತ್ ಯಶಸ್ವಿಯಾಗಿದ್ದಾರೆ. ಮರೆಗುಳಿ (Alzheimers) ಖಾಯಿಲೆಗೆ ತುತ್ತಾಗಿರುವ ಅಪ್ಪ ವೆಂಕೋಬ ರಾವ್, ಅಪ್ಪನಿಗಿಂತ ಕೆಲಸವೇ ಮುಖ್ಯವೆಂದು ಆ ಖಾಯಿಲೆ ಬಂದಿರುವವರನ್ನು ನೋಡಿಕೊಳ್ಳುವುದಕ್ಕಾಗಿಯೇ ಇರುವ ಒಂದು ಸಂಸ್ಥೆಗೆ ಅಪ್ಪನನ್ನು ಸೇರಿಸಿ ಹೊರಟು ಹೋಗುವ ಮಗ ಶಿವ, ಆತನಿಗೆ ಅಪ್ಪನ ಮೇಲೆ ಪ್ರೀತಿ - ಕಾಳಜಿ ಇಲ್ಲದಿದ್ದರೂ ಆಕಸ್ಮಿಕವಾಗಿ ಅಪ್ಪ ಕಳೆದುಹೋದಾಗ ಅವರನ್ನು ಹುಡುಕಲು ಶುರುಮಾಡುತ್ತಾನೆ, ಹುಡುಕಾಟದಲ್ಲಿ ವೆಂಕೋಬರನ್ನು ನೋಡಿಕೊಳ್ಳುತ್ತಿದ್ದ ಸಂಸ್ಥೆಯ ವೈದ್ಯೆ ಸಹನಾ ಅವನ ಜೊತೆಗೆ ಸೇರಿಕೊಳ್ಳುತ್ತಾರೆ, ಹುಡುಕಾಟದ ಸಂದರ್ಭದಲ್ಲಿ ಬಿಚ್ಚಿಕೊಳ್ಳುವ ಹೊಸ ಹೊಸ ಕ

ಹಾರುವುದು ಅನಿವಾರ್ಯ ಕರ್ಮ ನಮಗೆ..!!

Image
ಹಾಯ್ ಸ್ವೀಟು… ಇಷ್ಟು ದಿನದ ಪರಿಚಯದಲ್ಲಿ ಎಲ್ಲೋ ಒಂದು ಸಾರಿ ಮಾತ್ರ ನಾ ನಿನ್ನನ್ನ ಹೀಗೆ ಕರ್ದಿರೋದು… ಮತ್ಯಾವತ್ತು ಹೀಗೆ ಕರ್ದಿರ್ಲಿಲ್ಲ, ಕರೀಬೇಕು ಅಂತ ಅನ್ನಿಸಿಯೂ ಇರಲಿಲ್ಲ, ಮುಂದೆ ಕರೆಯೋದೂ ಇಲ್ಲ, ಕಾರಣ ಗೊತ್ತಿಲ್ಲ. ಕೊನೇ ಸಾರಿ ಕೂಗ್ತಿದ್ದೀನಿ ಜಾಸ್ತಿ ತಲೆ ಕೆಡಿಸಿಕೊಳ್ಳದೆ ಕಿವಿಗೊಟ್ಟು ಕೇಳಿಬಿಡು, ಸ್ವೀಟೂ…. ನಿನ್ನಲ್ಲಿರೋ ಪ್ರಶ್ನೆಗಳಿಗೆ ನನ್ನ ಹತ್ತಿರ ಉತ್ತರ ಇಲ್ಲ, ನಿನ್ನಲ್ಲಿರೋ ಪ್ರೀತಿಗೆ ಪ್ರತಿಯಾಗಿ ನೀಡೋಕೆ ಪ್ರೀತಿಯೂ ಇಲ್ಲ. ನಾ ನಿನ್ನ ಜೀವನದಲ್ಲಿ ಬಂದ ಒಂದು ಪಾತ್ರ, ನೀ ಅಂದುಕೊಂಡಂತೆ ನಿನ್ನ ಜೀವನಕ್ಕೆ ಸೂತ್ರ ಅಲ್ಲ, ನಿನ್ನೆಡೆಗೆ ನನಗೆ ಸೆಳೆತವಿರುವುದು ನಿಜ ಆದರೆ ಅದು ಎಂದಿಗೂ ಪ್ರೀತಿಯಾಗಿ ಪರಿವರ್ತನೆ ಹೊಂದಲಾರದು, ಆದ್ದರಿಂದ ನನ್ನಿಂದ ಏನನ್ನೂ ಅಪೇಕ್ಷಿಸಬೇಡ. ಇದನ್ನೆಲ್ಲ ಈಗ್ಯಾಕೆ ಹೇಳ್ತಿದ್ದೀನಿ ಅಂತ ಅರ್ಥ ಆಗ್ತಾ ಇಲ್ವಾ?? ಪರ್ವಾಗಿಲ್ಲ ಬಿಡು ನಿಧಾನಕ್ಕೆ ಅರ್ಥ ಆಗುತ್ತೆ, ಹೆಣ್ಣಿನ ಭಾವನೆಗಳೇ ಹಾಗೆ ಕೆಲವೊಮ್ಮೆ ಅವಳಿಗೇ ಅರ್ಥವಾಗುವುದಿಲ್ಲ.. ಅವಳ ತೊಳಲಾಟಗಳಿಗೆ ಕಾರಣವನ್ನೂ ಅವಳೇ ಹುಡುಕಿಕೊಳ್ಳಬೇಕು, ಪರಿಹಾರವನ್ನೂ ಅವಳೇ ಕಂಡುಕೊಳ್ಳಬೇಕು. ಇದನ್ನ ಅವಳಿಗೆ ಯಾರೂ ಕಲಿಸಬೇಕಾಗಿಲ್ಲ, ತಾನಾಗೇ ಕಲಿತು ಬಿಡ್ತಾಳೆ.. ಹೆಣ್ಣಿನ ಜೀವನ ನೀವಂದುಕೊಂಡಷ್ಟು ಸುಲಭವಲ್ಲ.. ನಿಮ್ಮ ಕಣ್ಣಿಗೆ ನಾವು ಆಕಾಶದಲ್ಲಿ ಸ್ವತಂತ್ರವಾಗಿ ಹಾರೋ ಗಿಣಿಗಳ ಥರ ಕಾಣ್ತೀವಿ ಆದ್ರೆ ನಾವು ಕೇವಲ ಗಿಣಿಗಳು ಅಷ್ಟೇ, ನೀವಂದುಕೊಂಡಂ