Posts

Showing posts from 2017

ನನ್ನದೆಂತದೋ‌ ಗೋಳು..

Image
ನಿರ್ಭಾವುಕತೆಯಾ? ಕಪಟತನವಾ? ಭಾವನೆಗಳನ್ನು ಅನುಭವಿಸಲಾರದಷ್ಟು ಸಮಯದ ಅಭಾವವಾ? ವಿವಿಧ ಭಾವಗಳನ್ನು ಕ್ಷಣಾರ್ಧದಲ್ಲಿ ಅನುಭವಿಸಿ ಮರೆಯುವ ತಾಕತ್ತಾ? ಊಹ್ಞೂಂ... ಇದನ್ನೆಲ್ಲಾ ನಾ ಹೇಗೆ ಹೇಳಲಿ? ಹುಟ್ಟಿ ಇಪ್ಪತ್ತು ಚಳಿಗಾಲ ಕಳೆದಿಲ್ಲ, ಇನ್ನೂ ಎಳೆಬಿಸಿಲು ಕಂಡರೆ ಮುದುರಿ ಕುಳಿತುಕೊಳ್ಳುವ ನನಗೆ ಇದನ್ನು ವಿವರಿಸಬಲ್ಲ ಅನುಭವ ದಕ್ಕುವುದೆಂತು? ಅನುಭವದ ಬದಲಾಗಿ ಒಂದಷ್ಟು ಅನುಮಾನಗಳು ಬಲಿತಿವೆ, ಪದೇ ಪದೇ ಕಾಡುತ್ತವೆ, ಕೊರೆಯುತ್ತವೆ.. ನಂಗೇನು ಗೊತ್ತಿಲ್ಲ ಬಿಟ್ಟುಬಿಡು ಎಂದಾಗ ತಲೆ ಮೊಟಕಿ ಹೋಗಿ ಉತ್ತರ ಹುಡುಕೋ ಸೋಂಭೇರಿ ಎಂದು ಗದರುತ್ತವೆ. ಅಯ್ಯೋ!! ಹಾಳು ಚಳಿ.. ಮುರುಟಿ ಕೂತಷ್ಟು ದೇಹದ ಸಂದುಗಳಲ್ಲೆಲ್ಲಾ ಓಡಾಡುತ್ತದೆ, ಬೆಚ್ಚಗೆ ಮಲಗೋಣ ಎಂದರೆ ಇದೊಂದು ಪೀಕಲಾಟ, ಆಗಲ್ಲಪ್ಪಾ!! ಇದ್ದ ವಿಷಯವನ್ನು ಇದ್ದಷ್ಟೇ ಹೇಳಿದರೆ ಚೋಟುದ್ದ, ಅಷ್ಟರಲ್ಲೇ ಹೇಳಿ ಮುಗಿಸಬಾರದಾ ಮಾರಾಯ ಎಂದು ಒಳಗೊಬ್ಬ ಕೂಗುತ್ತಿದ್ದಾರೆ.. ಕಿವುಡು ಬೆರಳುಗಳೆರೆಡು ದಿಕ್ಕಿಗೊಂದರಂತೆ ಬಿದ್ದಿರುವ ಅಕ್ಷರವನ್ನು ಕುಟ್ಟಿಕುಟ್ಟಿ ಕಥೆ ಕಟ್ಟುತ್ತಿವೆ, ಸಾಕ್ಷಿಗೆ ನಿದ್ದೆಗೆಟ್ಟಿರುವ ಕಣ್ಣಿವೆ! ಎಲ್ಲಿಂದ ಶುರು ಮಾಡಿದೆ?? ಹ್ಞಾಂ.. ವಿಷಯಕ್ಕೆ ಬರ್ತೇನೆ. ಎಲ್ಲಾ ಸರಿ!! ಒಂದು ದಿನದಲ್ಲಿ ಅದೆಷ್ಟು ಭಾವನೆಗಳನ್ನು ನಿಜವಾಗಿ ಅನುಭವಿಸೋಕೆ ಸಾಧ್ಯ? ಒಂದು, ಎರಡು, ಮೂರು.....ನೂರು?? ನೂರಾ!! ನೂರೆಲ್ಲಾ ಗಂಟೆಯಲ್ಲೇ ಆಗಿಹೋಗ್ಬೋದು ಕಣಾ.. ಅಂತ ರಾಗ ತೆಗೆಯುತ್ತಾನೆ ಒಳಗಿನವನು.

ಹಸಿರು ಲಂಗದ ಹುಡುಗಿ

Image
ಹಸಿರು ಲಂಗದ ಹುಡುಗಿ ಓರೆ ಬೈತಲೆ ತೆಗೆದು ಮುಂಗುರುಳ ಸುತ್ತಿಟ್ಟು ನಗೆ ಚೆಲ್ಲುತಾಳೆ.. ಸುರಗಿ ಸಂಪಿಗೆ ಜಾಜಿ ಮಲ್ಲಿಗೆ ಮಂದಾರ ಸುರಿದು ಮಾಲೆಯ ಕಟ್ಟಿ ಘಮ್ಮೆನ್ನುತಾಳೆ.. ಅಗಲ ಹಣೆ ನಡುವೆ ಚುಕ್ಕಿ ಬೊಟ್ಟನು ಇಟ್ಟು ಆಗಾಗ ತಿರುಗಿ ಹುಬ್ಬೆತ್ತುತಾಳೆ.. ಕಪ್ಪು ಕಾಡಿಗೆ ಹಚ್ಚಿ ಬೆರಗು ನೋಟ ಚೆಲ್ಲಿ ಕಣ್ಣ ಬಾಣ ನೆಟ್ಟು ಗುರಿ ಹೂಡುತಾಳೆ.. ಹೊಳೆವ ಬಳೆ ಕಾಲ್ಗೆಜ್ಜೆ ಚೋಟುದ್ದ ಕಿವಿಯೋಲೆ ಎಳೆ ಸರವ ತೊಟ್ಟು ಘಲ್ಲೆನ್ನುತಾಳೆ.. ತುಂಬು ಹರೆಯದ ಬಾಲೆ ಎಳಿತಾಳೆ ಸೆಳಿತಾಳೆ ಆಗಾಗ ಬಂದು ಎದೆ ತುಳಿಯುತಾಳೆ.. ಇಂತಿಷ್ಟು ಕಾರಣವೋ ಇನ್ನೆಷ್ಟು ಕಾರಣವೋ ಹಸಿರು ಲಂಗದ ಹುಡುಗಿ ಮನ ಕದಿಯುತಾಳೆ ಮಾತೇ ಮರೆಯುತಿದೆ ಎದೆ ಜೋರು ಬಡಿಯುತಿದೆ ಹೋಗಿ ಹೇಳಿದರೀಗ ಏನೆನ್ನುತಾಳೆ..? - ಅನಾಸ್ಕ

ಸಂದರ್ಶನ : ಅಂಶಿ ಪ್ರಸನ್ನಕುಮಾರ್

Image
"ಕನ್ನಡಪ್ರಭ" - ನಾನು ಅತ್ಯಂತ ಇಷ್ಟಪಡುವ ದಿನಪತ್ರಿಕೆ. ಪತ್ರಿಕೋದ್ಯಮದೆಡೆಗೆ ಬಾಲ್ಯದಿಂದಲೂ ಆಸಕ್ತಿಯಿದ್ದರೂ ಅದರೆಡೆಗೆ ಕುತೂಹಲ ಮೂಡಿಸಿದ್ದು ಕನ್ನಡಪ್ರಭ. ಪಿಯುಸಿ ಮುಗಿಸಿ ಪತ್ರಿಕೋದ್ಯಮಕ್ಕೆ ಕಾಲಿಟ್ಟ ಸಂದರ್ಭದಲ್ಲಿ ನಮಗೆ ಉಪನ್ಯಾಸಕರಾಗಿದ್ದ ಲೋಹಿತ್ ಸರ್ ನನ್ನನ್ನು ಕರೆದು ಯಾವುದಾದರು ಪತ್ರಿಕೆಯಲ್ಲಿ Internship ಮಾಡ್ತೀಯಾ? ಎಂದಾಗ ಖುಷಿಯಿಂದ ಹ್ಞೂಂ ಎಂದಿದ್ದೆ. ಹಾಗಾದರೆ ಕನ್ನಡಪ್ರಭ ಕಚೇರಿಗೆ ಹೋಗು ನಾನು ಅಂಶಿ ಸರ್ ಹತ್ತಿರ ಮಾತನಾಡಿದ್ದೇನೆ ಎಂದಾಗಲಂತೂ ಹಿರಿಹಿರಿ ಹಿಗ್ಗಿದ್ದೆ. ಕನ್ನಡಪ್ರಭ ಕಚೇರಿಗೆ ಕಾಲಿಟ್ಟ ಮೊದಲ ದಿನದಿಂದ ಇಂದಿನವರೆಗೂ ಈ ಮೂರು ವರ್ಷಗಳ ಅವಧಿಯಲ್ಲಿ ದಿನದಿನವೂ ಹೊಸ ಪಾಠಗಳನ್ನು ಕಲಿಯುತ್ತಲೇ ಇದ್ದೇನೆ, ಮೈಸೂರಿನ ಕನ್ನಡಪ್ರಭ ಕಚೇರಿ ನನಗೆ ಕಾಲೇಜಿಗಿಂತಲೂ ಹೆಚ್ಚಿನ ಪಾಠವನ್ನು ಕಲಿಸಿದೆ. ಅಲ್ಲಿರುವ ಪ್ರತಿಯೊಬ್ಬರೂ ನನಗೆ ಅಣ್ಣಂದಿರ ಹಾಗೆ ಸಿಡುಕದೆ ಪ್ರೀತಿಯಿಂದ ಮಾರ್ಗದರ್ಶನ ನೀಡುತ್ತಾರೆ. ಅದರಲ್ಲೂ ಮೈಸೂರು ಆವೃತ್ತಿಯ ಸಂಪಾದಕರಾಗಿರುವ ಅಂಶಿ ಪ್ರಸನ್ನಕುಮಾರ್ ಸರ್ ಅವರಂತೂ ಮಾರ್ಗದರ್ಶನದ ಜೊತೆಜೊತೆಗೆ ಸದಾ ಪ್ರೋತ್ಸಾಹಿಸುತ್ತಲೇ ಇರುತ್ತಾರೆ. ಆಗಾಗ ನಾನು ಕಚೇರಿಗೆ ಗೈರಾಗುತ್ತಲೇ ಇರುವುದರಿಂದ "Regularly Irregular fellow" ಎಂಬ ಪಟ್ಟವನ್ನು ಕಟ್ಟಿ ರೇಗಿಸುತ್ತಿರುತ್ತಾರೆ. ಕನ್ನಡಪ್ರಭದಲ್ಲಿ ನನ್ನ ಬೈಲೈನ್ ಬಂದಾಗಲೆಲ್ಲಾ ಹಲವರು ಅರೆ!! ಕೆಲಸಕ್ಕೆ ಸೇರಿಕೊಂಡಾಯ್ತಾ

ಹರೆಯದ ನದಿ ಸುಗಮವಾಗಿ ಹರಿಯಲಿ..

Image
ಹೊರಗೆಲ್ಲೋ ಸುತ್ತಾಡಿ ಮನೆಗೆ ಬಂದು ಕೂತಿರುತ್ತಾನಷ್ಟೇ. "ಎಲ್ ಹೋಗಿದ್ದಿ? ಹೋಗೋಕ್ ಮುಂಚೆ ಒಂದ್ ಮಾತ್ ಹೇಳಿ ಹೋಗೋಕಾಗಲ್ವಾ? ಸುಸ್ತಾಗಿದೆ ಅನ್ಸುತ್ತೆ.. ಫ್ರೆಶ್ ಆಗು, ತಿನ್ನೋಕ್ ಏನಾರ್ ಕೊಡ್ತೀನಿ.." ಅಂತ ತುಸು ಸಿಡುಕುತ್ತಲೇ ಪ್ರೀತಿ ತೋರುತ್ತಾಳೆ ಅಮ್ಮ. ಆಕೆ ಒಳಗೆ ಹೋಗಿ ಹತ್ತು ನಿಮಿಷವಾದರೂ ಈತ ಕುಳಿತಲ್ಲಿಂದ ಎದ್ದಿರುವುದಿಲ್ಲ, ಮತ್ತೆ ಕರೆಯುತ್ತಾಳೆ. ಉತ್ತರ ಬಾರದಿದ್ದನ್ನು ನೋಡಿ ಬೈಯುತ್ತಲೇ ಧಾವಿಸಿದವಳಿಗೆ, ಅಷ್ಟೊತ್ತು ಮೊಬೈಲ್ ನೋಡುತ್ತಾ ಮುಗುಳ್ನಗುತ್ತಿದ್ದ ಮಗ ತಾನು ಬಂದ ಕೂಡಲೇ ಸ್ಕ್ರೀನ್ ಆಫ್ ಮಾಡಿದ್ದನ್ನು ಕಂಡು ಸಣ್ಣಗೆ ಅನುಮಾನ! ಬಾಯ್ಬಿಟ್ಟು ಕೇಳುವುದಿಲ್ಲ, ಸುಮ್ಮನೇ ಗಮನಿಸುತ್ತಾಳೆ. ಸಾಲದ್ದಕ್ಕೆ ಅನುಮಾನಗಳಿಗೆ ಪುಷ್ಟಿ ಕೊಡುವಂತೆ ಮಗನ ನಡವಳಿಕೆಯಲ್ಲಿ ಸಣ್ಣಪುಟ್ಟ ಬದಲಾವಣೆ ಕಾಣುತ್ತಲೇ ಇರುತ್ತದೆ. ಮೊನ್ನೆ ಮೊನ್ನೆ ತಾನೇ ಪಿಯುಸಿ ಮುಗಿಸಿ ಡಿಗ್ರಿ ಜೀವನಕ್ಕೆ ಕಾಲಿಟ್ಟ ಮಗ ದೊಡ್ಡವನಂತೆ ವರ್ತಿಸಲು ಆರಂಭಿಸುತ್ತಾನೆ, ಸ್ಕೂಲಿಗೆ ಹೋಗುತ್ತಿದ್ದಾಗ ಟಿವಿ ನೋಡೋಕೂ ಪರ್ಮಿಶನ್ ಕೇಳುತ್ತಿದ್ದವನು ಈಗ ಅದೆಲ್ಲಿಗೆ ಹೋಗುವುದಾದರೂ ಹೇಳುವುದಿಲ್ಲ. ರಾತ್ರಿ ಹನ್ನೆರಡಾದರೂ ಮೊಬೈಲ್‍ನಲ್ಲೇ ಮುಳುಗಿರುತ್ತಾನೆ. ಕಾರಣವೇ ಇಲ್ಲದೆ ಸಿಡುಕುತ್ತಾನೆ, ಕಾರಣ ಕೇಳಿದರೆ ಸ್ವಲ್ಪ ಸುಮ್ನಿರು ಮಾರಾಯ್ತಿ ಅಂತ ಮುಖ ತಿರುಗಿಸುತ್ತಾನೆ. ಅರೆ!! ಇವನಿಗೇನಾಯಿತು, ಲವ್ವು? ಫ್ರೆಂಡ್ಸ್ ಸಹವಾಸ? ಸಿಗರೇಟು? ಡ್ರಗ್ಸ್? ಅಯ್ಯೋ.

ಊಹಾರೇಖೆ

Image
ನವಜಾತ ತಂಗಾಳಿ ಹೊಕ್ಕುಳ ಬಳ್ಳಿ ಸಡಿಲಿಸಿ ದಿಕ್ಕು ದೆಸೆಯಿಲ್ಲದೆ ಬೀದಿಗಿಳಿಯುತ್ತದೆ.. ಅಪ್ರಾಪ್ತ ಇರುಳಿಗೆ ರಾತ್ರಿಯಿಡೀ ಉರಿವ ಹುಣ್ಣಿಮೆ ಚಂದ್ರಮನ ಮೇಲೆ ಹುಸಿಗೋಪ.. ಚಡಪಡಿಸುತ್ತೇನೆ.. ಮೆದು ಪಾದದ ಹುಡುಗಿ ಎದೆ ತುಳಿಯುತ್ತಾಳೆ ಊಹಾರೇಖೆಗಳ ರಂಗೋಲಿ ಉದರದಂಗಳದಲ್ಲಿ.‌. ಬಿಳಿರಾತ್ರಿ ಬಿಳಿಚಿಕೊಳ್ಳಲು ಹುಡುಗಿ ಹೊರಡುತ್ತಾಳೆ ಚೆಂಗೆದ್ದು ಕುಣಿದ ಸ್ವಪ್ನ ಸುಸ್ತುಗೊಳ್ಳುತ್ತದೆ.. ಮತ್ತೆ ಚಡಪಡಿಸುತ್ತೇನೆ.‌‌. ಸ್ವಯಂಕೃತ ಅಪರಾಧಕ್ಕೆ ಕ್ಷಮೆಯಾಚಿಸಿಕೊಂಡು ಆತ್ಮಾವಲೋಕಿಸಿ ಕ್ಷಮಿಸಿಕೊಳ್ಳುತ್ತೇನೆ ಅಸ್ವಸ್ಥ ಕನಸಿಗಾಗಿ ಕೂತು ಕೊರಗುತ್ತೇನೆ ಸುಡುವ ನೆನಪು ಅಳೆಯಲು ಯಾವ ಮಾಪಕ? - ಅನಾಸ್ಕ

ಮುದ್ದು ಜೀವಗಳಿಗೆ ಹ್ಯಾಪಿ ಬರ್ತ್ ಡೇ 😘

Image
ಸಂಬಂಧಗಳಿಗೆ ತೀರಾ ನಿರ್ಬಂಧ ಹೇರಿ.. ಟೈಂ ಟೇಬಲ್‌ ಹಾಕಿ ಶಿಸ್ತುಬದ್ಧ ಮಾಡೋಕ್ ಹೋಗ್ಬಾರ್ದು, ಅವುಗಳ ಪಾಡಿಗೆ ಸ್ವತಂತ್ರವಾಗಿರೋಕೆ ಬಿಟ್ಟುಬಿಡಬೇಕು, ನಿಜವಾಗಿಯೂ ಸೆಳೆತ ಇದ್ದಿದ್ದೇ ಹೌದಾದರೆ ಅವು ಎಲ್ಲೇ ಹೋದರೂ ದೂರಾಗುವುದಿಲ್ಲ, ಎಂದೋ ಯಾವುದೋ ಬಿಂದುವಿನಲ್ಲಿ ಸಂಧಿಸುವುದು ಖಚಿತ. ಕರುಳಿಗೆ ನೈಜ ಸಂಬಂಧಗಳನ್ನು ಹಿಡಿದಿಟ್ಟುಕೊಳ್ಳೋ ತಾಕತ್ತು ಇದ್ದೇ ಇರುತ್ತೆ.. ಈ ನವೆಂಬರ್ ನಾಲ್ಕು ಅನ್ನೋದೇ ಹುಣ್ಣಿಮೆ ಬೆಳದಿಂಗಳಿದ್ದಂತೆ, ಸಾಲದ್ದಕ್ಕೆ ಇವತ್ತು ಅಸಲಿ ಪೌರ್ಣಿಮೆ, ಅದೇ ಖುಷಿಯಲ್ಲಿ ಒಂದಷ್ಟ್ ಸಾಲುಗಳನ್ನ ಗೀಚ್ತಿದ್ದೀನಿ.. ಸಹಿಸಿಕೊಳ್ಳಿ - ಒಡಹುಟ್ಟಿದವಳು.. ತೀರಾ ಒದ್ದಾಡಿ ಬದುಕಿದ ಕೂಸು ಅದು. ಏಳು ತಿಂಗಳಿಗೆ ಹುಟ್ಟಿ, ಏಳು ಜನ್ಮಕ್ಕಾಗುವಷ್ಟು ಸಂಕಟಪಟ್ಟಿರಬಹುದು. ಹುಟ್ಟಿ ಹೆಚ್ಚೂ ಕಡಿಮೆ ಹದಿನೈದು ದಿನಗಳಾದ ಮೇಲೆ ತಂಗಿಯ ಮುಖ ನೋಡಿದ್ದು ನಾನು. ಅವ್ಳು ಶಾಲೆಗ್ ಸೇರೋಷ್ಟ್ರಲ್ಲಿ ನಾನು ಹಾಸ್ಟೆಲ್ ಸೇರಿದೆ, ಸರಿಸುಮಾರು ಆರು ವರ್ಷವಾಯ್ತು ಅವಳೊಟ್ಟಿಗೆ ಹೆಚ್ಚು ಕಾಲ ಕಳೆಯದೆ. ಮನೆಗ್ ಹೋದಾಗ ಜಗಳ - ಹೊಡೆದಾಟಕ್ಕೇ ಟೈಂ ಸಾಕಾಗಲ್ಲ, ಇನ್ನು ಕೂತ್ಕೊಂಡ್ ಮಾತಾಡೋದ್ ಎಲ್ಲಿ? 😉 ಮನೆಗ್ ದಿನಾ ಫೋನ್ ಮಾಡಿ ಅರ್ಧರ್ಧ ಗಂಟೆ ಮಾತಾಡಿದ್ರೂ ಅವ್ಳತ್ರ ಮಾತಾಡೋದ್ ಕಮ್ಮಿನೇ. ಅವ್ಳ ಕತೆಗಳಿಗೂ ನಮ್ಮ ಕತೆಗಳಿಗೂ ಅಜಗಜಾಂತರ ವ್ಯತ್ಯಾಸ ಇರೋದ್ರಿಂದ ಪರಸ್ಪರ ಹಂಚಿಕೊಳ್ಳೋಕೂ ಆಗಲ್ಲ 😂😂 ಆದ್ರೂ ಅದೊಂಥರಾ ಮುದ್ಮುದ್ದು ಜೀವ, ನಾ ಕೊಡೋ ಅತೀ ಚ

ಗುಳಿ ಬೀಳದ ನಿನ್ನ ತುಂಬುಗೆನ್ನೆಗೆ ಮುತ್ತಿಡುವ ಆಸೆ ಚಿರಾಯು...

Image
ಕೂಸುಮರೀ..                    ಬೆಳದಿಂಗಳಿನಿಂದ ವಂಚಿತವಾದ ರಾತ್ರಿಯೊಂದು ಚಂದ್ರಮನ ತಂಪಿಗೆ ಹಂಬಲಿಸುವಂತೆ, ಅನಾಮಿಕ ಕಡಲಿನ ಭೋರ್ಗರೆತಕ್ಕೆ ಓಗೊಟ್ಟು ಮೈಲಿಗಟ್ಟಲೆ ಸಾಗಿ ಸೇರಲು ಪರಿತಪಿಸುವ ನದಿಯಂತೆ ಮನವೀಗ ನಿನ್ನ ಧ್ಯಾನದಲ್ಲಿದೆ. ಹಳವಂಡದ ಬದುಕಿಗೆ ಸಿಕ್ಕು ಜಡಗಟ್ಟಿರುವ ಭಾವನೆಗಳಿಗೆ ಮೃದು ಸ್ಪರ್ಶ ಬೇಕಿದೆ. ಸುತ್ತಲಿನ ಜಗದ ಕೌತುಕಗಳನ್ನೆಲ್ಲಾ ಮರೆಮಾಚುವಂತಹ ನಿನ್ನ ಕಾಡುವಿಕೆಯ ಗಾಢತೆ ಬದುಕಿನ ಮತ್ತೊಂದು ಮಜಲನ್ನು ಮುಖ್ಯ ವೇದಿಕೆಗೆ ಕರೆತಂದು ಕೂರಿಸಿದೆ. ನಿನ್ನ ಮೌನವನ್ನು ಅಧ್ಯಾಪಿಸುವ ನನ್ನೆಲ್ಲಾ ಯೋಜನೆಗಳು ತಲೆಕೆಳಗಾಗಿರುವ ಹೊತ್ತಿನಲ್ಲಿ ಭಾವನೆಗಳೆಲ್ಲಾ ಹಾಳೆಗೆ ಬೀಳುತ್ತಿವೆ. ಮಾಮೂಲಿ ಪದಗುಚ್ಛಗಳೆಲ್ಲಾ ನಿನ್ನ ವರ್ಣಿಸುವ ಪ್ರಯತ್ನದಲ್ಲಿ ಸೋತು ಬಿದ್ದಮೇಲೆ, ಇದೆಂಥದ್ದೋ ವಿಚಿತ್ರ ಶೈಲಿಯೊಂದು ಹುಟ್ಟಿಕೊಂಡಿದೆ. ಚಂದದ ಪದಗಳನ್ನೆಲ್ಲಾ ಹೆಕ್ಕಿ ತಂದು ಅದರಲ್ಲೇ ನಿನ್ನ ಮುದ್ದಾಡುವಾಸೆ, ಸದ್ಯಕ್ಕೀಗ ಪದಗಳ ಹುಡುಕಾಟದಲ್ಲಿದ್ದೇನೆ.. ಸಹಕರಿಸು, ಸ್ವೀಕರಿಸು.                     ಹರೆಯದ ದೋಣಿ ಶುರುವಿನಲ್ಲೇ ಮಗುಚಿ ಬೀಳುವಂತಹಾ ಸೆಳೆತ ಸೃಷ್ಟಿಸಿದ್ದ ನಿನ್ನ ತುಂಟುತನದ ಅಲೆಯೀಗ ಶಾಂತವಾಗಿದ್ದೇಕೆ? ಹರೆಯವೀಗ ತನ್ನ ಪರಮಾವಧಿಗೆ ಸಾಮಿಪ್ಯವಾಗುತ್ತಾ, ತಟ ಸೇರುವ ಬದಲು ಮತ್ತೆ ಮಗುಚಿ ಬೀಳಲು ಹಪಹಪಿಸುತ್ತಿದೆ, ಸೂಚನೆಯಿಲ್ಲದೇ! ಅಲೆಯೆಬ್ಬಿಸಿಬಿಡು ಮತ್ತೆ ನಿನ್ನಲ್ಲಿ ಮುಳುಗುವೆ. ಸಾವರಿಸಿಕೊಳ್ಳುವ ಮುನ್ನವೇ ಆವರಿಸಿಬಿ

ಕನ್ನಡ ಟಂಗ್ ಟ್ವಿಸ್ಟರ್

೬೨ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಪ್ರಜಾವಾಣಿ ದಿನಪತ್ರಿಕೆ ಏರ್ಪಡಿಸಿದ್ದ, ಕನ್ನಡ ಟಂಗ್ ಟ್ವಿಸ್ಟರ್ ಚಾಲೆಂಜ್ ವೀಡಿಯೋ ಇದಾಗಿದ್ದು, ಪ್ರಜಾವಾಣಿ ಅಂತರ್ಜಾಲ ಪುಟದಲ್ಲಿ ಪ್ರಕಟಗೊಂಡಿದೆ. ವೀಡಿಯೋದಲ್ಲಿ ಸ್ಕಂದ ಹಸ್ಸೀಮನೆ ಎಂದು ತಪ್ಪಾಗಿದ್ದು ಅದು ಸ್ಕಂದ ಅಸೀಮನೆ ಆಗಬೇಕಿತ್ತು.

ನವರಸ

Image
ಬದುಕೆಂಬ ನಳಪಾಕ ಭಾವನೆಯೇ ಒಗ್ಗರಣೆ ಚಿಟಪಟನೆ ಸಿಡಿಯುವುದು ಘಮ್ಮೆಂದು ಹರಡುವುದು ಖಾರ ತುಸು ಮುಂದಾಗೆ ಕಣ್ಣಾಲಿ ತುಂಬುವುದು ಸಿಹಿ ಖಾದ್ಯ ಬಾಯ್ಗಿಡಲು ನಾಲಿಗೆ ನಾಚುವುದು ಉಪ್ಪು ಹದ ತಪ್ಪಿದರೆ ಭಯಂಕರ ಕೋಪ ಜಾಸ್ತಿ ಹುಳಿ ಹಿಂಡಿದರೆ ಬೀಭತ್ಸ ರೂಪ ಹೊಟ್ಟೆ ಬಿರಿ ತಿಂದರೆ ವಾಯು ಭಾರ ಕುಸಿತ ಬಿಗಿಹಿಡಿದು ತೇಗಿದರೆ ಮನವು ಶಾಂತ ಎಂಬಲ್ಲಿಗೆ ಬದುಕು ಸಂತೃಪ್ತವಾಯ್ತು ನವರಸಗಳ ಮೇಳ ಸಂಪನ್ನವಾಯ್ತು.. - ಅನಾಸ್ಕ

ಅವನು - ಅವಳು ಮತ್ತು ವಿಕ್ರಾಂತ್

Image
ಬಿಟ್ಟು ಹೋಗಿದ್ದ.. ಸೌಜನ್ಯಕ್ಕೆ ತಿರುಗಿಯೂ ನೋಡದೆ ಬೈಕ್ ಸ್ಟಾರ್ಟ್ ಮಾಡಿದವನು ಭರ್ರನೆ ಹೊಗೆಯೆಬ್ಬಿಸಿ ಹೊರಟುಹೋಗಿದ್ದ. ಹಸಿರು ಹುಲ್ಲು ಹಾಸಿನ ಮೇಲೆ ಕುಳಿತಿದ್ದವಳ ಕನಸು ಸುಡುತ್ತಿತ್ತು. ಇಷ್ಟಕ್ಕೂ ಅವಳು ಮಾಡಿದ ತಪ್ಪಾದರೂ ಏನು? ಮೊನ್ನೆ ಕಾಲೇಜಿಗೆ ಹೋಗಲು ಬಸ್ ತಪ್ಪಿಸಿಕೊಂಡಾಗ ಅವಳದೇ ತರಗತಿಯ ವಿಕ್ರಾಂತ್ ಬೈಕಿನಲ್ಲಿ ಹೋಗೋಣ ಬಾ ಅಂತ ಕರೆದಿದ್ದ, ತರಗತಿಯ ಹುಡುಗನಾದ್ದರಿಂದ ಇವಳೂ ಕೂಡ ಹೆಚ್ಚು ಯೋಚಿಸದೆ ಬೈಕ್ ಹತ್ತಿದ್ದಳು. ಎಡವಟ್ಟಾಗಿದ್ದೇ ಅಲ್ಲಿ.. ವಿಕ್ರಾಂತ್ ಪಾಪದ ಹುಡುಗನಾದರೂ ಆತನಿಗೂ ಇವಳ ಪ್ರಿಯಕರ ಮನೋಹರನಿಗೂ ಸಣ್ಣ ಮನಸ್ತಾಪವಿತ್ತು. ಮೇಲ್ನೋಟಕ್ಕೆ ತೋರಿಸಿಕೊಳ್ಳುತ್ತಿರಲಿಲ್ಲವಾದರೂ ಒಳಗೊಳಗೇ ದ್ವೇಷಿಸುತ್ತಿದ್ದರು. ಇದಕ್ಕೆಲ್ಲಾ ಮೂಲ ಕಾರಣ ವಿಕ್ರಾಂತ್ ಪ್ರಿಯಾಳಿಗೆ ಸದ್ದಿಲ್ಲದೇ ಕಾಳು ಹಾಕುತ್ತಿದ್ದ. ಮನೋಹರ್ ಮತ್ತು ಪ್ರಿಯಾ ಒಬ್ಬರನ್ನೊಬ್ಬರು ಮೆಚ್ಚಿಕೊಂಡು ಅದಾಗಲೇ ಎರಡು ವರ್ಷ ಕಳೆದಿತ್ತು, ಅವರ ಪ್ರೇಮ ಪುರಾಣ ಇಡೀ ಕಾಲೇಜಿಗೇ ಗೊತ್ತಿದ್ದರಿಂದ ಯಾರೂ ಆ ವಿಷಯಕ್ಕೆ ತಲೆ ಹಾಕುತ್ತಿರಲಿಲ್ಲ. ಹೀಗಿರುವಾಗಲೇ ವಿಕ್ರಾಂತನಿಗೆ ಪ್ರಿಯಾಳ ಮೇಲೆ ಆಕರ್ಷಣೆ ಹುಟ್ಟಿದ್ದು. ಹೇಳಿ ಕೇಳಿ ವಿಕ್ರಾಂತ್ ಶ್ರೀಮಂತರ ಮನೆಯ ಹುಡುಗ, ಇಡೀ ಕಾಲೇಜೇ ಅವನತ್ತ ತಿರುಗಿ ನೋಡುವಂತೆ ದಿನಕ್ಕೊಂದು ಬಗೆಯ ಬೈಕು, ಬಟ್ಟೆ, ಶೂಗಳೊಂದಿಗೆ ಬರುತ್ತಿದ್ದ. ಇವನಿಗೆ ಪ್ರಿಯಾ ಮತ್ತು ಮನೋಹರರ ಕಥೆ ಗೊತ್ತಿತ್ತಾದರೂ ಹಣದ ಮದ ಏರಿದ್ದರಿಂದ ಭಾವನೆಗಳ ವ

ಬರಗಾಲ

Image
ಕೆಂಡ ಕಾರುವ ಭಾನು ಸುಟ್ಟು ಬಿದ್ದ ಮೇಘ ಭುವಿಯೀಗ ಒಣಗಿದ ಗರಿಗರಿ ಬಟ್ಟೆ ಬಡವಿ ಭೂಮಾತೆ ಬಸವಳಿದು ಕುಳಿತಿಹಳು ಮೂರು ಮಾಸದಿಂದ ಉಪವಾಸವಂತೆ ಹೊಳೆದಂಡೆ ಗರಿಕೆಯ ಬದುಕು ಬಡವಾಗಿರಲು ಚಿಗರೆ ಮರಿಗೆಲ್ಲಿ ಹೊತ್ತು ಊಟ? ಎದೆ ಕವಚ ಹೊರಗಿಣುಕಿ, ಭುವಿ ಕದವ ಬಡಿದಿರಲು ರಕ್ತನಾಳಕ್ಕೀಗ ಸಾವಿನಾಟ ಬತ್ತಿದ ಹೊಲದಲ್ಲಿ ಬಿತ್ತಿದ ಬೀಜವು ನರಳಾಟದ ಹಾಡು ಹಾಡುತ್ತಿತ್ತು ಮೊಳಕೆಯ ಮೂಲವೇ ಮೌನವಾಗಿರಲು ಶ್ವಾಸಕೋಶದ ಒಳಗೆ ಶೋಕಗೀತೆ ಹತ್ತು ಎಕರೆಯ ಒಡೆಯ ಅತ್ತು ಸುಸ್ತಾಗಿರಲು ಮೂರು ಗುಂಟೆಯ ರೈತ ಸತ್ತು ಹೋದ ಹಟ್ಟಿಯಲಿ ಕಟ್ಟಿದ ಬಾಚು ಕೋಡಿನ ಎತ್ತು ಹಿಡಿ ಹುಲ್ಲಿಗಾಗಿ ಕೊರಗುತಿತ್ತು ಕೆರೆ ತಳದಿ ಕಪ್ಪೆಮರಿ ಅಂಗಾತ ಬಿದ್ದಿರಲು ಸರಸರನೆ ಓಡಿತ್ತು ಉರಗರಾಜ ಸರಿಸೃಪದ ಪರದಾಟ ಕಣ್ಣಿಗೆ ಗೋಚರಿಸೆ ಒಣಕು ಕೊಕ್ಕರೆಗೀಗ ಹಬ್ಬದೂಟ - ಅನಾಸ್ಕ

ಕೈ ಬರಹ ಸರಿಯಿಲ್ಲ ಗುರೂ..!

Image
ಅವನು ಕ್ಲಾಸಿನ ತಲೆಹರಟೆ ಹುಡುಗರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದವನು, ತರಗತಿಯ ಅಷ್ಟೂ ಹುಡುಗಿಯರನ್ನು ಬಿಟ್ಟೂಬಿಡದೆ ರೇಗಿಸುತ್ತಾ, ಕಾಲೆಳೆಯುತ್ತಿದ್ದ. ಆದರೆ ಅವರಲ್ಲಿ ಒಬ್ಬಳ ಮೇಲೆ ಮಾತ್ರ ವಿಶೇಷ ಪ್ರೀತಿ. ಹೇಗಾದರೂ ಮಾಡಿ ಅವಳನ್ನು ಒಲಿಸಿಕೊಳ್ಳಬೇಕೆಂಬ ಬಯಕೆ. ಎಷ್ಟೋ ಬಾರಿ ತರಗತಿಯಲ್ಲೇ ಪ್ರಪೋಸ್ ಮಾಡಿ ಮಂಗಳಾರತಿ ಮಾಡಿಸಿಕೊಂಡಿದ್ದ. ಆದರೆ ತಲೆಹರಟೆಯ ಉತ್ತುಂಗ ತಲುಪಿದ್ದ ಅವನಿಗೆ ಅದೆಲ್ಲಾ ತಾಗುತ್ತಿರಲಿಲ್ಲ. ಇವನ ಆಟಗಳನ್ನು ನೋಡಿ ನೋಡಿ ಬೇಸತ್ತವಳಿಗೆ ಅವನಿಂದ ಮುಕ್ತಿ ಸಿಕ್ಕರೆ ಸಾಕೆನಿಸಿಹೋಗಿತ್ತು. ಅವಳ ಸಮಸ್ಯೆಯನ್ನರಿತ ತರಗತಿಯ ಹುಡುಗಿಯರೆಲ್ಲಾ ಅವಳ ಬೆಂಬಲಕ್ಕೆ ನಿಂತರು. ಮೊನ್ನೆ ಸೋಮವಾರ, ಅದಕ್ಕಿಂತಲೂ ಮಿಗಿಲಾಗಿ 'ರಕ್ಷಾ ಬಂಧನ'ದ ದಿನ. ಅವನನ್ನು ಖೆಡ್ಡಾಕ್ಕೆ ಬೀಳಿಸಲು ಹುಡುಗಿಯರ ಗುಂಪು ಸರ್ವಸನ್ನದ್ಧವಾಗಿತ್ತು. ಅವನೆಲ್ಲೇ ಕಂಡರೂ ಸರಿ, ಐಟಿ ಅಧಿಕಾರಿಗಳಂತೆ ದಾಳಿ ಮಾಡಲು ಹುಡುಗಿಯರ ತಂಡ ತಯಾರಾಗಿತ್ತು. ಹಿಂದಿನ ದಿನ ಪೂರ್ತಿ ಫೋನಿನಲ್ಲೇ ಯೋಜನೆ ರೂಪಿಸಿ ಕಾಲೇಜಿಗೆ ಬಂದ ಹುಡುಗಿಯರಿಗೆ ಅವನು ಮಾತ್ರ ದೊಡ್ಡ ಶಾಕ್ ಕೊಟ್ಟಿದ್ದ! ಕ್ಯಾಂಟೀನಿನಿಂದ ಹಿಡಿದು ಕಾರಿಡಾರಿನ ಮೂಲೆಮೂಲೆಗಳಲ್ಲೂ ಅವನಿಗಾಗಿ ಶೋಧಕಾರ್ಯ ಆರಂಭವಾಯ್ತು. ಊಹ್ಞೂಂ.. ಅವನ ಸುಳಿವೇ ಇಲ್ಲ. ಇವರ ಪ್ರಯತ್ನವನ್ನು ವಿಫಲಗೊಳಿಸುವ ಸಲುವಾಗಿ ಅಂದು ಆತ ಕಾಲೇಜಿಗೆ ಬರಲೇ ಇಲ್ಲ! ಫೋನ್ ಮಾಡಿದರೂ ಉತ್ತರವಿಲ್ಲ. ಹುಡುಗಿಯರ ಅಷ್ಟೂ ಯೋಜನೆಗಳು ತಲೆಕೆಳ

ಹೋಗೇ..‌

Image
ಸ್ಮಶಾನದಲ್ಲಿ ಸತ್ತು ಬಿದ್ದ ಇದ್ದಿಲ ಚೂರಿನಷ್ಟು ಕಪ್ಪೇನಲ್ಲ ಚಂದ್ರ ಸಾಯುವ ಮೂರು ದಿನ ಮುಂಚಿನ ನಡುರಾತ್ರಿ ಹೊತ್ತು.. ಕಾಡಂಚಿನಲ್ಲಿ ಹುಲಿ ಕೂಗಿದ್ದು ಕಿವಿಗಿನ್ನೂ ನೆನಪಿದೆ ಮಳೆನೀರಿನ ತುಂಟ ಹನಿಯೊಂದು ಹೆಂಚುಗಳ ಒಳಹೊಕ್ಕು ಕದ್ದು ನೋಡಿದ್ದು ಆವಾಗಲೇ.. ತುಟಿ ಕಚ್ಚಿರಲಿಲ್ಲ ಅಲ್ಲವಾ? ಛೇ.. ಕಚ್ಚಿಬಿಡಬೇಕಿತ್ತು ನೋಡು‌ ನಿನ್ನ ಉಗುರಿನ ಗಾಯ ಇನ್ನೂ ಅಂಗಿಗೆ ಬಣ್ಣ ಬಳಿಯುತ್ತಿದೆ ಕಾಲ್ಗೆಜ್ಜೆಯನ್ನು ಎಲ್ಲಿ ಬಿಚ್ಚಿಟ್ಟಿದ್ದಿ ಪಪ್ಪಿ ಇಡಬೇಕು ಅದರ ಹೊಳಪಿಗೆ ಅವತ್ತು ನಿನ್ನ ಸೆರಗಿಗಂಟಿದ್ದ ಅತ್ತರಿನ ಘಮವಿನ್ನೂ ಕೋಣೆ ದಾಟಿಲ್ಲ ಆತುರವಿದ್ದಿದ್ದು ನಿನಗೆ ಮಾತ್ರ ಎಂಥಾ ಹುಡುಗಿ ಮಾರಾಯ್ತಿ.. ಹೋಗೇ ನನಗೊಂದು ಮಾತು ಹೇಳಲು ನಿನ್ನ ಗಂಟಲಲ್ಲೇನು ಕಡುಬು ಸಿಕ್ಕಿಕೊಂಡಿತ್ತಾ? ನೀನವತ್ತು ರಸದೌತಣ ಬಡಿಸಿದಾಗಲೇ ಕೇಳಿಬಿಡಬೇಕಿತ್ತು ನಾನು.. ಆ ಬಿಸಿಯಲ್ಲಿ ನೀ ತಣಿದಿದ್ದೂ ಗೊತ್ತಾಗದೇ ಹೋಯಿತಲ್ಲಾ ಅಳುತ್ತಾ ಕೂತಿದ್ದೀನಿ ಗೊತ್ತಾ? ನೀ ಹೊರಡುವಾಗ ಎಷ್ಟೊತ್ತಾಗಿತ್ತು ಹಿತ್ತಲಲ್ಲಿ ದಿನಾ ಕಿರುಚಾಡುವ ಜೀರುಂಡೆಯಾದರೂ ಎದ್ದಿತ್ತಾ? ಹಣೆ ಮೇಲೆ ಕುಂಕುಮವಿದ್ದಾಗಲೇ ಸಾಯಬೇಕು ಎಂದು ಮದುವೆಯ ದಿನವೇ ಹೇಳಿದ್ದೆಯಲ್ಲಾ? ಆ ಆಸೆಯೂ ಬೆವರಿನಲ್ಲಿ ಕರಗಿದೆ ನೋಡು ಏಯ್ ಪುಟ್ಟಾ ಒಂಚೂರು ಎದ್ದೇಳೇ ಅಂಗಳದಂಚಿನಲ್ಲಿ ಗುಲಾಬಿ ಅರಳಿದೆ ಮೊನ್ನೆ ತಾನೇ ನೀ ಮುತ್ತಿಟ್ಟಿದ್ದೆಯಲ್ಲಾ ಅದೇ ಮೊಗ್ಗು ಮೈನೆರೆದಿರುವುದು ಎದ್ದೇಳೋದಿ

ಮೂರಿಂಚು ಜಾಗದಲ್ಲಿ ನನ್ನ ಹೆಜ್ಜೆ ಗುರುತಿವೆ..

Image
ಮತ್ತದೇ ಹಳೇ ಹುಡುಗಿಗೆ...                                         ಡಿಯರ್ ಕೂಸೇ, ನಿನ್ ಮುಖ ನೋಡಿ ನೋಡಿ ಬೇಜಾರಾಗಿದೆ, ಅದೇ ನಗು! ಅದೇ ಸಿಟ್ಟು! ಅದೇ ತಲೆಹರಟೆ! ಏನೂ ಚೇಂಜ್ ಇಲ್ಲ ಸೋ ಇದೆಲ್ಲದರ ಸಹವಾಸ ಬಿಟ್ಟುಬಿಡಬೇಕು ಅನ್ನಿಸ್ತಿತ್ತು.. ಆದ್ರೇನ್ಮಾಡೋದು? ನಿನಗಿಂತ ಹಳತಾಗಿರೋ ನನ್ ಮುಖಕ್ಕೆ ಬೇರೆ ಯಾರೂ ಸಿಗದೇ ಇದ್ರೆ? ಎಂಬ ಭಯ.. ಆದ್ದರಿಂದ ಹೆಂಗೂ ನಿಂಗೆ ತಗ್ಲಾಕ್ಕೊಂಡಾಗಿದೆ, ಕಷ್ಟನೋ? ಸುಖನೋ? ಕಣ್ಮುಚ್ಕಂಡ್ ನಿನ್ ಜೊತೆ ಬದುಕಬೇಕು ಅನ್ನೋ ದುಸ್ಸಾಹಸದ ನಿರ್ಧಾರಕ್ಕೆ ಕೈ ಹಾಕಿದೀನಿ.. ಜಾಸ್ತಿ ಕಾಟ ಕೊಡದೆ ಕಾಪಾಡು!! ಸಿಟ್ ಬಂತಾ? ಕ್ವಾಪನಾ? ಮುಖ ಕೆಂಪಾಯ್ತಾ? ಅಯ್ಯೋ ಆಗ್ಲಿ ಬಿಡೇ, ನಿನ್ ಜೊತೆ ಬದುಕೋ ನಿರ್ಧಾರ ತಗೊಂಡಿದೀನಲ್ಲ ಅದಕ್ಕಿಂತ ದೊಡ್ಡದೇನಲ್ಲ ಇದು. ನಿನ್ನನ್ನು ಮೊದಲ ಬಾರಿಗೆ ನೋಡಿದ ದಿನ ನನ್ನ ಬದುಕಿನ ಅತಿ ದೊಡ್ಡ ದುರಂತಕ್ಕೆ ಮುನ್ನುಡಿ ಹಾಡಿದ ದಿನ, ಆ ನಿನ್ ಮನೆಹಾಳ್ ಮುಂಗುರುಳಿನಿಂದ ನನ್ನ ಬ್ರಹ್ಮಚರ್ಯವನ್ನ ಗಲ್ಲಿಗೇರಿಸಿದ ದಿನ, ಪಂಚಾಂಗದಲ್ಲಿ ಅದೇನೋ ಗಂಡಕಾಲ ಅಂತಾರಲ್ಲ ಮೋಸ್ಟ್ಲಿ ಅದೇ ಘಳಿಗೆಯಲ್ಲಿ ನೀ ನನ್ ಕಣ್ಣಿಗೆ ಬಿದ್ದಿದ್ದಿರಬೇಕು. ಆ ಕ್ಷಣದಲ್ಲಿ ನಮ್ಮನೆ ದೇವ್ರು ನಿದ್ದೆ ಮಾಡ್ತಿದ್ದ ಅನ್ಸುತ್ತೆ ಇಲ್ಲಾಂದ್ರೆ ಖಂಡಿತ ಈ ಘನಘೋರ ಅಪಘಾತದಿಂದ ನನ್ನ ಬಚಾವ್ ಮಾಡ್ತಿದ್ದ ಅಥವಾ ಇನ್ಯಾವುದೋ ಹರಕೆ ತೀರಿಸದೇ ಬಾಕಿ ಉಳಿದಿದ್ದು ಅದೇ ಸಿಟ್ಟಲ್ಲಿ ನನ್ನ ಹರಕೆ ಕುರಿ ಮಾಡಿದ್ನೋ? ಏನೋ? ನಾ ಕಾಣೆ

ಮೌನ ಮಾತಾದಾಗ...

Image
        ಕರುಳಬಳ್ಳಿಯ ಕಡಿದುಕೊಂಡು ಹೊರಬಂದ ಕಂದನೊಂದು ಮೌನವ ಮುರಿದಂತೆ, ಮುಂಗಾರಿನ ಆರಂಭದಲ್ಲಿ ಸದ್ದು ಮಾಡಿದ ಗುಡುಗಿನಂತೆ, ಹುಣ್ಣಿಮೆಯ ದಿನ ಶರಧಿಯು ಮೌನ ಪರದೆಯ ಸರಿಸಿ ಅಲೆಗಳೊಂದಿಗೆ ಅಬ್ಬರಿಸಿದಂತೆ, ಮಡುಗಟ್ಟಿದ ದುಃಖವು ಮೌನದ ಕಟ್ಟೆ ಒಡೆದು ಅಳುವಾಗಿ ಹೊರಹೊಮ್ಮಿದಂತೆ.. ನನ್ನವಳು ಬಹುದಿನಗಳ ನಂತರ ಮೌನದ ಪರಿಧಿಯ ಭೇದಿಸಿ ಭಾವ ತರಂಗಗಳ ಸೃಷ್ಟಿಸಿ ಎನ್ನ ಮನ ಹೊಕ್ಕಳು.. ಅವಳಿಗಾಗಿ ಕಾಡಿದ್ದೆಷ್ಟೋ? ಬೇಡಿದ್ದೆಷ್ಟೋ? ನಾನರಿಯೆ. ಆದರೆ ಒಂದಂತೂ ಅರಿವಾಗಿತ್ತು - ಅವಳೆಂದರೆ ಅಪ್ಪಟ ಮೌನ, ನಾನೆಂದರೆ ಮೌನವನ್ನರಿಯದ ಮಾತು ಎಂದು. ಮಾತಿಗೂ ಮೌನಕ್ಕೂ ಎತ್ತಣಿಂದೆತ್ತಣ ಸಂಬಂಧ? ನನ್ನ ಪ್ರತಿ ಮಾತಿಗೂ ಅವಳ ಮೌನ ಉತ್ತರಿಸುತ್ತಿತ್ತು ಅಂತೆಯೇ ಅವಳ ಮೌನಕ್ಕೆ ನನ್ನ ಮಾತು ಕೂಡಾ.. ಹೀಗಿರುವಾಗಲೇ ಮೌನಕ್ಕೂ ಮಾತಿಗೂ ಪ್ರೀತಿ ಹುಟ್ಟಿದ್ದು.         ಎನ್ನ ಹೃದಯದ ಭಾವನೆಗಳನ್ನೆಲ್ಲಾ ಒಟ್ಟುಹಾಕಿ ಮಾತಿನ ಮೂಲಕ ಅವಳಿಗೆ ತಲುಪಿಸಿದೆ, ಇನ್ನಾದರೂ ಮೌನವ ಮುರಿಯಲೆಂದು. ಊಹ್ಞೂಂ.. ಎಲ್ಲವೂ ವ್ಯರ್ಥ. ನನ್ನಷ್ಟೂ ಮಾತುಗಳನ್ನೂ ಅವಳ ಒಂದೇ ಒಂದು ಮೌನ ನುಂಗಿಹಾಕಿತ್ತು. ಅವಳ ಮೌನ ತಪಸ್ಸಿನ ಮುಂದೆ ನಾನು ಸೋತಿದ್ದೆ, ಎನ್ನ ಮಾತುಗಳಿಗೆ ಕಿಂಚಿತ್ತೂ ಕದಡದ ಅವಳ ಮೌನದ ಅಗಾಧತೆಯ ಬಗ್ಗೆ ನನ್ನೊಳಗೆ ಕುತೂಹಲವೆದ್ದಿತ್ತು. ಎಂತಾದರೂ ಸರಿಯೇ ಅವಳ ಮೌನವನ್ನು ಮುರಿಯಲೇ ಬೇಕೆಂಬ ಶಪಥ ತೊಟ್ಟು ಪದೇ ಪದೇ ಎನ್ನ ಮಾತಿನ ಬಾಣಗಳ ಅವಳತ್ತ ಎಸೆದೆ, ಕರೆದೆ, ಕೂಗಿದೆ, ಗೋಗರೆ

ಅಪ್ಪ, ಅಮ್ಮ ಮತ್ತು ನಾನು

Image
ನೀವ್ ಯಾವ್ದಾರ್ ಹುಡುಗಿಯನ್ನ ಪ್ರೀತ್ಸಿದ್ರೆ ಅದನ್ನ ಅವ್ಳಿಗ್ ತಿಳ್ಸೋಕ್ಕೋಸ್ಕರ ಪ್ರಪೋಸ್ ಮಾಡ್ಬೇಕು.. ಅವ್ಳ್ ಬರ್ತ್ ಡೇಗೆ ಹನ್ನೆರಡ್ ಗಂಟೆಗೆ ಸರಿಯಾಗ್ ವಿಶ್ ಮಾಡಿ ಪ್ರೀತಿಯ ಅಗಾಧತೆಯನ್ನ ತೋರ್ಪಡಿಸಬೇಕು, ವ್ಯಾಲೆಂಟೆನ್ಸ್ ಡೇಗೆ ಲವ್ ಯೂ ಬೇಬಿ.. ನೀನೇ ನನ್ ಸರ್ವಸ್ವ ಅಂತ ಬಾಯ್ಬಿಟ್ಟು ಹೇಳಿ ಅವ್ಳನ್ ಇಂಪ್ರೆಸ್ ಮಾಡ್ಬೇಕು, ಗಿಫ್ಟ್ ಕೊಟ್ಟು ನಂದು ಟ್ರೂ ಲವ್ ಕಣೇ ಅಂತ ತೋರಿಸ್ಕೋಬೇಕು! ಬಟ್.‌. ಅಪ್ಪ - ಅಮ್ಮಂದಿರ ವಿಷ್ಯದಲ್ಲಿ? ನಾನಂತೂ ಇದೂವರೆಗೂ ಅಪ್ಪ - ಅಮ್ಮನಿಗೆ ಬರ್ತ್ ಡೇ ವಿಶ್ ಮಾಡಿಲ್ಲ, ಹ್ಯಾಪಿ ಮದರ್ಸ್ ಡೇ, ಹ್ಯಾಪಿ ಫಾದರ್ಸ್ ಡೇ.. ಲವ್ ಯೂ ಮಾ.. ಲವ್ ಯೂ ಪಾ.. ಅಂತ ಹೋಗಿ ನನ್ನೊಳಗಿರೋ ಪ್ರೀತಿಯನ್ನ ಹೇಳ್ಕೊಂಡಿಲ್ಲ, ಅವ್ರು ಏನಾದ್ರೂ ಸಾಧಿಸಿದಾಗ ಕಂಗ್ರಾಟ್ಸ್ ಅಂತ ಕೈ ಕುಲುಕಿಯೂ ಇಲ್ಲ.. ಆದ್ರೂ ಅವರ್ಯಾವತ್ತೂ ಬೇಜಾರ್ ಮಾಡ್ಕೊಂಡಿಲ್ಲ.. ಬಾಯ್ಬಿಟ್ಟು ಹೇಳದಿದ್ದರೂ ಇರುತ್ತದಲ್ಲ ಆ ಲವ್ವೇ ಟ್ರೂ ಲವ್ವು! 😘 ನಾನ್ ಅಪ್ಪ - ಅಮ್ಮನ ಜೊತೆ ನಡೆದುಕೊಳ್ಳೋ ರೀತಿ ತುಂಬಾ ಜನರಿಗೆ ವಿಚಿತ್ರ ಅನ್ನಿಸ್ಬೋದು.. ಊರಿಗ್ ಹೋದಾಗ ನಾನ್ ಫ್ರೆಂಡ್ಸು, ದೋಸ್ತ್ರು ಅಂತ ಗ್ಯಾಂಗ್ ಕಟ್ಕೊಂಡ್ ತಿರ್ಗೋಕ್ಕಿಂತ ಅಪ್ಪನ ಜೊತೆ ಸುತ್ತಾಡೋದೇ ಜಾಸ್ತಿ.. ಏಯ್.. ಹೋಗಾ.. ಬಾರಾ ಅಂತಾನೇ ಅಪ್ಪ - ನಾನು ಮಾತಾಡದು.. ಇವತ್ತಿಗೂ ನನ್ನಪ್ಪ ನಾ ಮಾಡೋ ಖರ್ಚಿನ ಡಿಟೇಲ್ಸ್ ಕೇಳಿಲ್ಲ.. ಹಾಗಂತ ನಮ್ಮನೆಯಲ್ಲಿ ಕೂತು ತಿಂದರೂ ಕರಗದಷ್ಟು ಸಂಪತ್ತೇ

ನಿನ್ನ ಮುಂಗುರುಳ ತಿರುವು ಅಪಘಾತ ವಲಯ..!!

Image
ಕಣ್ಸೆಳೆತದಲ್ಲೆನ್ನೆದೆಗಡಲಲೆಗಳೇರಿಳಿತಗಳನೇರುಪೇರುಗೊಳಿಸಿದವಳೇ..      ಲಯ ತಪ್ಪಿದ ಹೃದಯ ಬಡಿತದ ಸಮ್ಮುಖದಲ್ಲೇ ನಿನಗಾಗಿ (ಕೊನೆಯದಾಗಿ?) ಈ ಪತ್ರ ಬರೆಯುತ್ತಿದ್ದೇನೆ.. ಒಪ್ಪಿಸಿಕೋ.. ಸಂವತ್ಸರವೊಂದು ಕಳಚಿ ಬಿದ್ದು ಹೊಸದಕ್ಕೆ ದಾರಿ ಮಾಡಿಕೊಟ್ಟಿದೆ ಅಂತೆಯೇ ಸಂಬಂಧವೂ ಕೂಡ.. ಆದರಿಲ್ಲಿ ಹೊಸದರ ನೆರಳು ಇಣುಕುವ ಸಾಧ್ಯತೆ ಕಡಿಮೆ ಇದೆ ಅದಕ್ಕಾಗಿ ಸದ್ಯದ ಪರಿಸ್ಥಿಯ ಮಟ್ಟಿಗೆ ಇದು ಯುಗಾಂತ್ಯ. ಇಷ್ಟು ವರ್ಷಗಳವರೆಗೆ ಕಣ್ಣಲ್ಲಿ ಕಾಪಿಟ್ಟುಕೊಂಡು ಬಂದಿದ್ದ ನಿನ್ನ ಬಿಂಬ ಕದಡಿ ಹೋಗಿದೆ, ಎದ್ದಿರುವ ಅಲೆಗಳು ಮೌನವಾಗುವ ಸಂಭವವಂತೂ ಕಾಣುತ್ತಿಲ್ಲ, ಬೊಗಸೆಯಲ್ಲಿ‌ ನಿನ್ನ ಬಿಂಬವ ಬಂಧಿಸಿ ಉಳಿಸಿಕೊಳ್ಳೋಣವೆಂದರೆ ನಡುಗುವ ಕೈಗಳು ಅದಕ್ಕೆ ಸಹಕರಿಸುತ್ತಿಲ್ಲ, ಅಸಹಾಯಕ ಅಮಾಯಕ ನಿರ್ದೋಷಿ ನಿರಪರಾಧಿಗೆ ನೀ ಕೊಟ್ಟ ಜೀವಾವಧಿ ಶಿಕ್ಷೆಯನ್ನು ವಜಾಗೊಳಿಸುವ ಮುನ್ಸೂಚನೆಯಂತೂ ಯಾವ ದಿಕ್ಕಿನಲ್ಲೂ ತೋರುತ್ತಿಲ್ಲ, ಕನಸುಗಳನ್ನೆಲ್ಲ ಕಳೆದುಕೊಂಡು ಬದುಕಿನ ನಡುಬೀದಿಯಲಿ ದಿವಾಳಿಯಾಗಿ ಕುಳಿತಿರುವೆ.‌. ಮುಂದೇನು? ಅದ್ಯಾಕೆ ಅಷ್ಟೊಂದು ಕಟುವಾಗಿ ಹೋದೆ? ಚಿಕ್ಕ ಪುಟ್ಟ ವಿಷಯಗಳಿಗೂ ತಲೆ ಕೆಡಿಸಿಕೊಳ್ಳುತ್ತಿದ್ದವಳು, ನಾ ಪರಿಪರಿಯಾಗಿ ಬೇಡಿಕೊಂಡರೂ ನಿರ್ಲಕ್ಷಿಸಿ ಬಿಟ್ಟೆಯಲ್ಲಾ? ಹೊರಟು ಹೋಗು ಅಂತ ಒಲ್ಲದ ಮನಸ್ಸಿನಿಂದಲೇ ಹೇಳಿ ಕಳಿಸಿಬಿಟ್ಟೆಯಲ್ಲಾ? ನಿನ್ನಿಷ್ಟವನ್ನೆಲ್ಲಾ ಒತ್ತೆಯಿಟ್ಟು ಏನನ್ನ ಸಾಧಿಸೋಕೆ ಹೊರಟಿದ್ದಿ? ನನ್ನ ನಿಷ್ಕಲ್ಮಶ ಭಾವವೀಗ ಜೀವವಿಲ್ಲ