Posts

Showing posts from July, 2017

ಹೋಗೇ..‌

Image
ಸ್ಮಶಾನದಲ್ಲಿ ಸತ್ತು ಬಿದ್ದ ಇದ್ದಿಲ ಚೂರಿನಷ್ಟು ಕಪ್ಪೇನಲ್ಲ ಚಂದ್ರ ಸಾಯುವ ಮೂರು ದಿನ ಮುಂಚಿನ ನಡುರಾತ್ರಿ ಹೊತ್ತು.. ಕಾಡಂಚಿನಲ್ಲಿ ಹುಲಿ ಕೂಗಿದ್ದು ಕಿವಿಗಿನ್ನೂ ನೆನಪಿದೆ ಮಳೆನೀರಿನ ತುಂಟ ಹನಿಯೊಂದು ಹೆಂಚುಗಳ ಒಳಹೊಕ್ಕು ಕದ್ದು ನೋಡಿದ್ದು ಆವಾಗಲೇ.. ತುಟಿ ಕಚ್ಚಿರಲಿಲ್ಲ ಅಲ್ಲವಾ? ಛೇ.. ಕಚ್ಚಿಬಿಡಬೇಕಿತ್ತು ನೋಡು‌ ನಿನ್ನ ಉಗುರಿನ ಗಾಯ ಇನ್ನೂ ಅಂಗಿಗೆ ಬಣ್ಣ ಬಳಿಯುತ್ತಿದೆ ಕಾಲ್ಗೆಜ್ಜೆಯನ್ನು ಎಲ್ಲಿ ಬಿಚ್ಚಿಟ್ಟಿದ್ದಿ ಪಪ್ಪಿ ಇಡಬೇಕು ಅದರ ಹೊಳಪಿಗೆ ಅವತ್ತು ನಿನ್ನ ಸೆರಗಿಗಂಟಿದ್ದ ಅತ್ತರಿನ ಘಮವಿನ್ನೂ ಕೋಣೆ ದಾಟಿಲ್ಲ ಆತುರವಿದ್ದಿದ್ದು ನಿನಗೆ ಮಾತ್ರ ಎಂಥಾ ಹುಡುಗಿ ಮಾರಾಯ್ತಿ.. ಹೋಗೇ ನನಗೊಂದು ಮಾತು ಹೇಳಲು ನಿನ್ನ ಗಂಟಲಲ್ಲೇನು ಕಡುಬು ಸಿಕ್ಕಿಕೊಂಡಿತ್ತಾ? ನೀನವತ್ತು ರಸದೌತಣ ಬಡಿಸಿದಾಗಲೇ ಕೇಳಿಬಿಡಬೇಕಿತ್ತು ನಾನು.. ಆ ಬಿಸಿಯಲ್ಲಿ ನೀ ತಣಿದಿದ್ದೂ ಗೊತ್ತಾಗದೇ ಹೋಯಿತಲ್ಲಾ ಅಳುತ್ತಾ ಕೂತಿದ್ದೀನಿ ಗೊತ್ತಾ? ನೀ ಹೊರಡುವಾಗ ಎಷ್ಟೊತ್ತಾಗಿತ್ತು ಹಿತ್ತಲಲ್ಲಿ ದಿನಾ ಕಿರುಚಾಡುವ ಜೀರುಂಡೆಯಾದರೂ ಎದ್ದಿತ್ತಾ? ಹಣೆ ಮೇಲೆ ಕುಂಕುಮವಿದ್ದಾಗಲೇ ಸಾಯಬೇಕು ಎಂದು ಮದುವೆಯ ದಿನವೇ ಹೇಳಿದ್ದೆಯಲ್ಲಾ? ಆ ಆಸೆಯೂ ಬೆವರಿನಲ್ಲಿ ಕರಗಿದೆ ನೋಡು ಏಯ್ ಪುಟ್ಟಾ ಒಂಚೂರು ಎದ್ದೇಳೇ ಅಂಗಳದಂಚಿನಲ್ಲಿ ಗುಲಾಬಿ ಅರಳಿದೆ ಮೊನ್ನೆ ತಾನೇ ನೀ ಮುತ್ತಿಟ್ಟಿದ್ದೆಯಲ್ಲಾ ಅದೇ ಮೊಗ್ಗು ಮೈನೆರೆದಿರುವುದು ಎದ್ದೇಳೋದಿ