Posts

Showing posts from October, 2016

ಮೊದಲ ಹಂತದ ಪ್ರೀತಿ...

Image
ಮೊದಲ ಹಂತದ ಪ್ರೀತಿ.. ಲವಲವಿಕೆ, ಉತ್ಸಾಹ.. ಇಬ್ಬರೂ ಎಕ್ಸೈಟು.. ಲವ್ ಅಟ್ ಫಸ್ಟ್ ಸೈಟು. ಗಂಟೆಗಟ್ಟಲೆ ಮಾತು.. ಹೈಕು, ವಾಟ್ಸಾಪು.. ಅದರಲ್ಲೇ ಲವ್ವಿಂಗು.. ಅದರೊಳಗೇ ಲಿವ್ವಿಂಗು. ತಲೆಹರಟೆ ಹುಡುಗ.. ವಿಚಿತ್ರ ಆಸೆಗಳ ಓನರ್ರು.. ಡೀಸೆಂಟು ಹುಡುಗಿ.. ಹದಿನೆಂಟಾಗದ ಮೈನರ್ರು. ಬೈಬೇಕು ಅವಳು.. ಹೊಡಿಬೇಕು, ಬಡಿಬೇಕು.. ಕ್ಷಣಕ್ಷಣಕೂ ಸಿಡುಕಿದರೆ.. ಇನ್ನೂ ಒಳ್ಳೆಯದು. ಕೇಳಬಾರದು ಸಾರಿ.. ಬಿಡಬೇಕು ಮಾತುಕತೆ.. ಹುಸಿ ಮುನಿಸು ಮುಗಿದಾಗ.. ಗುನುಗಬೇಕು ಲವ್ ಯೂ. ಪಾಪ!! ಹೊಸದು ಪ್ರೀತಿ.. ಆಗಿಲ್ಲ ಅನುಭವ.. ಮಾಡಿದ್ದೆಲ್ಲಾ ಚೆಂದ.. ಏನೇನೋ ಹುಚ್ಚು ಆಸೆ. ಹುಡುಗಿ ಪಾಪದ ಜೀವ.. ಬರೀ ಮಾತಿನ ಮಲ್ಲಿ.. ಕಡಿಮೆ ಕಾಮನ್ ಸೆನ್ಸು.. ಸ್ಟುಡೆಂಟ್ ಆಫ್ ಸೈನ್ಸು. ಈ ಕ್ಷಣಕೆ ಲವ್ವು.. ಇನ್ನೊಮ್ಮೆಗೆ ಫ್ರೆಂಡ್ಶಿಪ್ಪು.. ಮೂಡಿಲ್ಲ ಕ್ಲಾರಿಟಿ.. ಕನ್ಫ್ಯೂಶನ್ ಪಾರ್ಟಿ. ಕುಲವೊಂದೇ, ಕ್ಯಾಸ್ಟೊಂದೇ.. ಸಬ್ ಡಿವಿಷನ್ ಬೇರೆ.. ಅದೇ ದೊಡ್ಡ ಪ್ರಾಬ್ಲಮ್ಮು.. ಮುಂದೆ ಮದುವೆಗೆ. ಒಪ್ಪುವುದು ಮ್ಯಾಟ್ರಲ್ಲ.. ಉಳಿಸಿಕೊಳ್ಳುವುದೇ ಚಾಲೆಂಜು.. ಸಕ್ಸಸ್ ಆಗದ ಪ್ರೀತಿಯ.. ಶುರು ಮಾಡುವುದೇಕೆ? ಹಚ್ಚಿದಳು ಹುಡುಗಿ ಆನೆಪಟಾಕಿ.. ದಂಗಾದ ಹುಡುಗ ಹೊಸವರಸೆ ನೋಡಿ.. ಹಣೆಬರಹ ಸರಿಯಿಲ್ಲ, ಕ್ಯಾಲೆಂಡರ್ ನೋಡಿದ.. ಎದ್ದು ಕಾಣುತ್ತಿತ್ತು ಏಪ್ರಿಲ್ ಒಂದು. -ಅನಾಸ್ಕ

ಅಗ್ನಿ ಮೂಲೆಯ ಕೋಣೆ..

Image
ಅಗ್ನಿ ಮೂಲೆಯ ಕೋಣೆ.. ಬಾಗಿಲಿಗೆ ಹಳೆಬೀಗ.. ಕ್ವಿಂಟಲ್ಲು ಧೂಳು, ಜೊತೆಗಷ್ಟು ತುಕ್ಕು.. ಒಡೆದು ನುಗ್ಗಿದ ಠಕ್ಕ.. ಹುಡುಕುತ್ತ ವರಹಗಳ. ಒಳಗೆ ಮರದ ಟ್ರಂಕು.. ಅದರೊಳಗೆ ಬಿಳಿಪೇಜು.. ಅರ್ಥವಾಗದ ಬರಹ.. ನಡುನಡುವೆ ಶಾಹಿ ಕಲೆ.. ಕೊನೆಗೊಂದು ಪ್ರೇಮಪತಾಕೆ. ಓದಿದ್ದೊಂದೇ ವರ್ಷ ಬಾಲವಾಡಿಯಲ್ಲಿ.. ಆಮೇಲೆ ಸುತ್ತಿದ್ದು ಮನೆಹಿಂದಿನ ಬ್ಯಾಣ.. ಆಗಿದ್ದು ಮಾತ್ರ ಚೋರವಿದ್ಯಾ ಪ್ರವೀಣ.. ತಲೆಕೆಡಿಸಿಕೊಂಡ ಬಿಳಿ ಪೇಜನು ನೋಡಿ.. ಇರಬಹುದೇ ಇದು ಆಸ್ತಿ ಪತ್ರ ಎಂದು. ನೆನಪಾಯಿತು ಹತ್ತರ ನೋಟು.. ಒಂದುದ್ದ ಗೆರೆ ಪಕ್ಕಕ್ಕೆ ಕೋಳಿಮೊಟ್ಟೆ.. ತಡಕಾಡಿದ ಕಳ್ಳ ಗೆರೆ-ಮೊಟ್ಟೆಗಳಿಗಾಗಿ.. ಮೊಟ್ಟೆಗಳ ರಾಶಿ ಎದುರಾಯಿತು ಕಣ್ಗೆ.. ಕಂಡ ಗೆರೆಗಳು ಮಾತ್ರ ಸೊನ್ನೆ ಸೊನ್ನೆ.. ಇರಬೇಕು ಪತ್ರದಲಿ ಒಂದಾದರು ನಂಬರು.. ಇರದಿರೇ ಅದೆಂಥಾ ಆಸ್ತಿಪತ್ರ..? ತಲೆ ಓಡಿಸಿದ ಚೋರ ಪ್ರವೀಣ.. ಮತ್ತೆ ಹಾಳೆಯ ತೆಗೆದು ನೋಡೇಬಿಟ್ಟ.. ವ್ಹಾ.. ಕೊನೆಯಲ್ಲಿ ಕಂಡಿತು ಗೆರೆ ಮತ್ತು ಮೊಟ್ಟೆ. ಕುಣಿದು ಕುಪ್ಪಳಿಸಿದ, ಚೀಟಿಯ ಮಡಚಿದ.. ಹರಕು ಜೇಬಿಗೆ ತುರುಕಿ ಹುಚ್ಚೆದ್ದು ಓಡಿದ.. ದಾರಿಯಲಿ ಎದುರಾದ ಪ್ರಾಣಸ್ನೇಹಿತ.. ಒಂದನೇ ಕ್ಲಾಸಿಗೆ ಇಸ್ಕೂಲು ಬಿಟ್ಟವ.. ಕಳ್ಳನ ಕಾಲಿಗೆ ಬಿತ್ತು ಗಕ್ಕನೆ ಬ್ರೇಕು.. ಪಟಪಟನೆ ಒದರಿದ, ಕಿವಿಗಷ್ಟು ಮೊಳೆಹೊಡೆದ.. ಅಪ್ಪಿ, ಎಳೆದಾಡಿ ಕೈಹಿಡಿದು ಕುಣಿದ.. ಕೊನೆಗೂ ಚೀಟಿಯ ತೆಗೆದು ಸ್ನೇಹಿತನ ಕೈಗಿತ್ತ.. ಕೋಟ

ಹೆಚ್ಚೇನು ಆಸೆಯಿಲ್ಲ...

Image
ಹೆಚ್ಚೇನು ಆಸೆಯಿಲ್ಲ... ತಲೆಗೂದಲು ಹಣ್ಣಾಗಿ.. ನಡು ಪೂರ್ಣ ಬೆಂಡಾಗಿ.. ಬೊಚ್ಚು ಬಾಯಿಂದ ನಾ ನಗುವಾಗ.. ನೀ ನಗಬೇಕು, ಯೌವ್ವನದಲ್ಲಿ ನಿನ್ನ ಕಾಡಿದ ಕ್ಷಣಗಳನ್ನೆಲ್ಲ ಮೆಲುಕಬೇಕು. ಮುಡಿಗಿಟ್ಟ ಮಲ್ಲಿಗೆ.. ಕೆನ್ನೆ ಇಳಿಜಾರಿನ ಮುತ್ತು.. ಹುಸಿಕೋಪ ಬಿರುನೋಟ.. ಎಲ್ಲ ನೆನಪಿಸಬೇಕು.. ಸಾಯುವ ಮುನ್ನ ಹುಡುಗನಾಗಬೇಕು, ನಿನ್ನ ನೋಟಕೆ ಪೂರ್ತಿ ಕರಗಬೇಕು. ಮತ್ತೆ ಹಂಬಲಿಸಬೇಕು.. ಪ್ರೀತಿಸಲು, ರಮಿಸಲು, ನಿನ್ನೊಡನೆ ಬದುಕಲು.. ನನ್ನ ಹಾತೊರೆಕೆಗೆ ನೀ ಕಡಿವಾಣ ಹಾಕಬೇಕು.. ಕಳಿಸಿಕೊಡಬೇಕು.. ದೇಹ ತಣಿಯುವ ಮುನ್ನ ಎದೆ ಮೇಲೆ ಕೈಯಿಟ್ಟು ಮನಸಾರೆ ಮುತ್ತಿಟ್ಟು ನನ್ನ ಕಳಿಸಿಕೊಡಬೇಕು. ಹೆಚ್ಚೇನು ಆಸೆಯಿಲ್ಲ... ನನ್ನ ಕೊನೆಯುಸಿರು ನಿನ್ನ ಸಾನಿಧ್ಯವ ಬಯಸಿದೆ... -ಅನಾಸ್ಕ