Posts

Showing posts from May, 2017

ಮೂರಿಂಚು ಜಾಗದಲ್ಲಿ ನನ್ನ ಹೆಜ್ಜೆ ಗುರುತಿವೆ..

Image
ಮತ್ತದೇ ಹಳೇ ಹುಡುಗಿಗೆ...                                         ಡಿಯರ್ ಕೂಸೇ, ನಿನ್ ಮುಖ ನೋಡಿ ನೋಡಿ ಬೇಜಾರಾಗಿದೆ, ಅದೇ ನಗು! ಅದೇ ಸಿಟ್ಟು! ಅದೇ ತಲೆಹರಟೆ! ಏನೂ ಚೇಂಜ್ ಇಲ್ಲ ಸೋ ಇದೆಲ್ಲದರ ಸಹವಾಸ ಬಿಟ್ಟುಬಿಡಬೇಕು ಅನ್ನಿಸ್ತಿತ್ತು.. ಆದ್ರೇನ್ಮಾಡೋದು? ನಿನಗಿಂತ ಹಳತಾಗಿರೋ ನನ್ ಮುಖಕ್ಕೆ ಬೇರೆ ಯಾರೂ ಸಿಗದೇ ಇದ್ರೆ? ಎಂಬ ಭಯ.. ಆದ್ದರಿಂದ ಹೆಂಗೂ ನಿಂಗೆ ತಗ್ಲಾಕ್ಕೊಂಡಾಗಿದೆ, ಕಷ್ಟನೋ? ಸುಖನೋ? ಕಣ್ಮುಚ್ಕಂಡ್ ನಿನ್ ಜೊತೆ ಬದುಕಬೇಕು ಅನ್ನೋ ದುಸ್ಸಾಹಸದ ನಿರ್ಧಾರಕ್ಕೆ ಕೈ ಹಾಕಿದೀನಿ.. ಜಾಸ್ತಿ ಕಾಟ ಕೊಡದೆ ಕಾಪಾಡು!! ಸಿಟ್ ಬಂತಾ? ಕ್ವಾಪನಾ? ಮುಖ ಕೆಂಪಾಯ್ತಾ? ಅಯ್ಯೋ ಆಗ್ಲಿ ಬಿಡೇ, ನಿನ್ ಜೊತೆ ಬದುಕೋ ನಿರ್ಧಾರ ತಗೊಂಡಿದೀನಲ್ಲ ಅದಕ್ಕಿಂತ ದೊಡ್ಡದೇನಲ್ಲ ಇದು. ನಿನ್ನನ್ನು ಮೊದಲ ಬಾರಿಗೆ ನೋಡಿದ ದಿನ ನನ್ನ ಬದುಕಿನ ಅತಿ ದೊಡ್ಡ ದುರಂತಕ್ಕೆ ಮುನ್ನುಡಿ ಹಾಡಿದ ದಿನ, ಆ ನಿನ್ ಮನೆಹಾಳ್ ಮುಂಗುರುಳಿನಿಂದ ನನ್ನ ಬ್ರಹ್ಮಚರ್ಯವನ್ನ ಗಲ್ಲಿಗೇರಿಸಿದ ದಿನ, ಪಂಚಾಂಗದಲ್ಲಿ ಅದೇನೋ ಗಂಡಕಾಲ ಅಂತಾರಲ್ಲ ಮೋಸ್ಟ್ಲಿ ಅದೇ ಘಳಿಗೆಯಲ್ಲಿ ನೀ ನನ್ ಕಣ್ಣಿಗೆ ಬಿದ್ದಿದ್ದಿರಬೇಕು. ಆ ಕ್ಷಣದಲ್ಲಿ ನಮ್ಮನೆ ದೇವ್ರು ನಿದ್ದೆ ಮಾಡ್ತಿದ್ದ ಅನ್ಸುತ್ತೆ ಇಲ್ಲಾಂದ್ರೆ ಖಂಡಿತ ಈ ಘನಘೋರ ಅಪಘಾತದಿಂದ ನನ್ನ ಬಚಾವ್ ಮಾಡ್ತಿದ್ದ ಅಥವಾ ಇನ್ಯಾವುದೋ ಹರಕೆ ತೀರಿಸದೇ ಬಾಕಿ ಉಳಿದಿದ್ದು ಅದೇ ಸಿಟ್ಟಲ್ಲಿ ನನ್ನ ಹರಕೆ ಕುರಿ ಮಾಡಿದ್ನೋ? ಏನೋ? ನಾ ಕಾಣೆ

ಮೌನ ಮಾತಾದಾಗ...

Image
        ಕರುಳಬಳ್ಳಿಯ ಕಡಿದುಕೊಂಡು ಹೊರಬಂದ ಕಂದನೊಂದು ಮೌನವ ಮುರಿದಂತೆ, ಮುಂಗಾರಿನ ಆರಂಭದಲ್ಲಿ ಸದ್ದು ಮಾಡಿದ ಗುಡುಗಿನಂತೆ, ಹುಣ್ಣಿಮೆಯ ದಿನ ಶರಧಿಯು ಮೌನ ಪರದೆಯ ಸರಿಸಿ ಅಲೆಗಳೊಂದಿಗೆ ಅಬ್ಬರಿಸಿದಂತೆ, ಮಡುಗಟ್ಟಿದ ದುಃಖವು ಮೌನದ ಕಟ್ಟೆ ಒಡೆದು ಅಳುವಾಗಿ ಹೊರಹೊಮ್ಮಿದಂತೆ.. ನನ್ನವಳು ಬಹುದಿನಗಳ ನಂತರ ಮೌನದ ಪರಿಧಿಯ ಭೇದಿಸಿ ಭಾವ ತರಂಗಗಳ ಸೃಷ್ಟಿಸಿ ಎನ್ನ ಮನ ಹೊಕ್ಕಳು.. ಅವಳಿಗಾಗಿ ಕಾಡಿದ್ದೆಷ್ಟೋ? ಬೇಡಿದ್ದೆಷ್ಟೋ? ನಾನರಿಯೆ. ಆದರೆ ಒಂದಂತೂ ಅರಿವಾಗಿತ್ತು - ಅವಳೆಂದರೆ ಅಪ್ಪಟ ಮೌನ, ನಾನೆಂದರೆ ಮೌನವನ್ನರಿಯದ ಮಾತು ಎಂದು. ಮಾತಿಗೂ ಮೌನಕ್ಕೂ ಎತ್ತಣಿಂದೆತ್ತಣ ಸಂಬಂಧ? ನನ್ನ ಪ್ರತಿ ಮಾತಿಗೂ ಅವಳ ಮೌನ ಉತ್ತರಿಸುತ್ತಿತ್ತು ಅಂತೆಯೇ ಅವಳ ಮೌನಕ್ಕೆ ನನ್ನ ಮಾತು ಕೂಡಾ.. ಹೀಗಿರುವಾಗಲೇ ಮೌನಕ್ಕೂ ಮಾತಿಗೂ ಪ್ರೀತಿ ಹುಟ್ಟಿದ್ದು.         ಎನ್ನ ಹೃದಯದ ಭಾವನೆಗಳನ್ನೆಲ್ಲಾ ಒಟ್ಟುಹಾಕಿ ಮಾತಿನ ಮೂಲಕ ಅವಳಿಗೆ ತಲುಪಿಸಿದೆ, ಇನ್ನಾದರೂ ಮೌನವ ಮುರಿಯಲೆಂದು. ಊಹ್ಞೂಂ.. ಎಲ್ಲವೂ ವ್ಯರ್ಥ. ನನ್ನಷ್ಟೂ ಮಾತುಗಳನ್ನೂ ಅವಳ ಒಂದೇ ಒಂದು ಮೌನ ನುಂಗಿಹಾಕಿತ್ತು. ಅವಳ ಮೌನ ತಪಸ್ಸಿನ ಮುಂದೆ ನಾನು ಸೋತಿದ್ದೆ, ಎನ್ನ ಮಾತುಗಳಿಗೆ ಕಿಂಚಿತ್ತೂ ಕದಡದ ಅವಳ ಮೌನದ ಅಗಾಧತೆಯ ಬಗ್ಗೆ ನನ್ನೊಳಗೆ ಕುತೂಹಲವೆದ್ದಿತ್ತು. ಎಂತಾದರೂ ಸರಿಯೇ ಅವಳ ಮೌನವನ್ನು ಮುರಿಯಲೇ ಬೇಕೆಂಬ ಶಪಥ ತೊಟ್ಟು ಪದೇ ಪದೇ ಎನ್ನ ಮಾತಿನ ಬಾಣಗಳ ಅವಳತ್ತ ಎಸೆದೆ, ಕರೆದೆ, ಕೂಗಿದೆ, ಗೋಗರೆ

ಅಪ್ಪ, ಅಮ್ಮ ಮತ್ತು ನಾನು

Image
ನೀವ್ ಯಾವ್ದಾರ್ ಹುಡುಗಿಯನ್ನ ಪ್ರೀತ್ಸಿದ್ರೆ ಅದನ್ನ ಅವ್ಳಿಗ್ ತಿಳ್ಸೋಕ್ಕೋಸ್ಕರ ಪ್ರಪೋಸ್ ಮಾಡ್ಬೇಕು.. ಅವ್ಳ್ ಬರ್ತ್ ಡೇಗೆ ಹನ್ನೆರಡ್ ಗಂಟೆಗೆ ಸರಿಯಾಗ್ ವಿಶ್ ಮಾಡಿ ಪ್ರೀತಿಯ ಅಗಾಧತೆಯನ್ನ ತೋರ್ಪಡಿಸಬೇಕು, ವ್ಯಾಲೆಂಟೆನ್ಸ್ ಡೇಗೆ ಲವ್ ಯೂ ಬೇಬಿ.. ನೀನೇ ನನ್ ಸರ್ವಸ್ವ ಅಂತ ಬಾಯ್ಬಿಟ್ಟು ಹೇಳಿ ಅವ್ಳನ್ ಇಂಪ್ರೆಸ್ ಮಾಡ್ಬೇಕು, ಗಿಫ್ಟ್ ಕೊಟ್ಟು ನಂದು ಟ್ರೂ ಲವ್ ಕಣೇ ಅಂತ ತೋರಿಸ್ಕೋಬೇಕು! ಬಟ್.‌. ಅಪ್ಪ - ಅಮ್ಮಂದಿರ ವಿಷ್ಯದಲ್ಲಿ? ನಾನಂತೂ ಇದೂವರೆಗೂ ಅಪ್ಪ - ಅಮ್ಮನಿಗೆ ಬರ್ತ್ ಡೇ ವಿಶ್ ಮಾಡಿಲ್ಲ, ಹ್ಯಾಪಿ ಮದರ್ಸ್ ಡೇ, ಹ್ಯಾಪಿ ಫಾದರ್ಸ್ ಡೇ.. ಲವ್ ಯೂ ಮಾ.. ಲವ್ ಯೂ ಪಾ.. ಅಂತ ಹೋಗಿ ನನ್ನೊಳಗಿರೋ ಪ್ರೀತಿಯನ್ನ ಹೇಳ್ಕೊಂಡಿಲ್ಲ, ಅವ್ರು ಏನಾದ್ರೂ ಸಾಧಿಸಿದಾಗ ಕಂಗ್ರಾಟ್ಸ್ ಅಂತ ಕೈ ಕುಲುಕಿಯೂ ಇಲ್ಲ.. ಆದ್ರೂ ಅವರ್ಯಾವತ್ತೂ ಬೇಜಾರ್ ಮಾಡ್ಕೊಂಡಿಲ್ಲ.. ಬಾಯ್ಬಿಟ್ಟು ಹೇಳದಿದ್ದರೂ ಇರುತ್ತದಲ್ಲ ಆ ಲವ್ವೇ ಟ್ರೂ ಲವ್ವು! 😘 ನಾನ್ ಅಪ್ಪ - ಅಮ್ಮನ ಜೊತೆ ನಡೆದುಕೊಳ್ಳೋ ರೀತಿ ತುಂಬಾ ಜನರಿಗೆ ವಿಚಿತ್ರ ಅನ್ನಿಸ್ಬೋದು.. ಊರಿಗ್ ಹೋದಾಗ ನಾನ್ ಫ್ರೆಂಡ್ಸು, ದೋಸ್ತ್ರು ಅಂತ ಗ್ಯಾಂಗ್ ಕಟ್ಕೊಂಡ್ ತಿರ್ಗೋಕ್ಕಿಂತ ಅಪ್ಪನ ಜೊತೆ ಸುತ್ತಾಡೋದೇ ಜಾಸ್ತಿ.. ಏಯ್.. ಹೋಗಾ.. ಬಾರಾ ಅಂತಾನೇ ಅಪ್ಪ - ನಾನು ಮಾತಾಡದು.. ಇವತ್ತಿಗೂ ನನ್ನಪ್ಪ ನಾ ಮಾಡೋ ಖರ್ಚಿನ ಡಿಟೇಲ್ಸ್ ಕೇಳಿಲ್ಲ.. ಹಾಗಂತ ನಮ್ಮನೆಯಲ್ಲಿ ಕೂತು ತಿಂದರೂ ಕರಗದಷ್ಟು ಸಂಪತ್ತೇ