Posts

Showing posts from 2015

ಬಾರದ ಹುಡುಗಿಗೆ ಹಂಬಲಿಸಿದೆ ಮನ....

Image
                                                                    ಓ ದೇವರೇ..                    ನಿನ್ನನ್ನ ಎಲ್ರೂ ತ್ರಿಕಾಲ ಜ್ಞಾನಿ ಅಂತಾರೆ!!  ನೀ ಯಾವ ಸೀಮೆಯ ಜ್ಞಾನಿಯೋ??  ಇಷ್ಟ್ ದಿನ ಕೈ ಮುಗಿದು ಕಾಪಾಡು ತಂದೆ ಅಂತಿದ್ದ ಹುಡುಗ ಈಗ ಹೀಗ್ಯಾಕೆ ಮಾತಾಡ್ತಿದ್ದಾನೆ ಅನ್ನೋದು ನಿಂಗೆ ಗೊತ್ತಿರ್ಲೇಬೇಕು ಬಿಕಾಸ್ ಯೂ ಆರ್ ಎ ತ್ರಿಕಾಲ ಜ್ಞಾನಿ ನೋ? ಹೋಗೋಗು ಇನ್ಮುಂದೆ ನಾ ನಿನ್ ಮೇಲೆ ಯಾವತ್ತೂ ನಂಬ್ಕೆ ಇಡಲ್ಲ.                     ಆ ಹುಡ್ಗಿ ನನ್ನನ್ನ ಯಾವತ್ತಿಗೂ ಪ್ರೀತ್ಸೋದಿಲ್ಲ ಅನ್ನೋದು ನಿಂಗೆ ಗೊತ್ತಿರ್ಲಿಲ್ವಾ? ಗೊತ್ತಿಲ್ಲ ಅನ್ಬೇಡಪ್ಪಾ, ನೀನು ತ್ರಿಕಾಲ ಜ್ಞಾನಿ! ಮುಂದೇನಾಗುತ್ತೆ ಅನ್ನೋದು ನಿಂಗೆ ಗೊತ್ತಿಲ್ದೇ ಇರುತ್ತಾ?? ಮೋಸ್ಟ್ಲಿ ನಿನಗೆ ಹುಡುಗರ ಮೇಲೆ ದ್ವೇಷ ಇದೆ ಅನ್ಸುತ್ತೆ ಅದ್ಕೆ ಹೆಚ್ಚಿನ ಹುಡುಗ್ರು ಲೈಫಲ್ಲಿ ಒಂದೊಂದು ಇತಿಹಾಸ ಇಡ್ತೀಯ!! ಅಲ್ಲಯ್ಯಾ ಚಿಕ್ಕಂದಿನಿಂದಲೂ ಅಜ್ಜ ಹೇಳ್ಕೊಟ್ಟ ಶ್ಲೋಕಗಳನ್ನ ಒಂದಿನಾನೂ ತಪ್ಪಿಸ್ದೆ ನಿಂಗೆ ಒಪ್ಸಿದ್ದಕ್ಕೆ ಇಂಥಾ ಕಾಣಿಕೆ ಕೊಡೋದಾ??                       ಓಯ್ ನನ್ ಮಾತು ಕೇಳ್ಸ್ಕೊತ್ತಿದ್ದೀಯಾ? ಈಗ ನಾ ಕೇಳೋದಕ್ಕೆಲ್ಲಾ ಉತ್ರ ಕೊಡು. ಅವ್ಳನ್ನ ನನ್ ಜೀವ್ನಕ್ಕೆ ಯಾಕೆ ಪರಿಚಯ್ಸಿದ್ದು?? ಅದೂ ಸಾಲದು ಅನ್ನೋ ಹಾಗೆ ಅವ್ಳನ್ನ ತೀರಾ ಹತ್ರ ಮಾಡಿದ್ಯಾಕೆ?? ಊಹುಂ.. ಅದ್ಕೂ ಮೊದ್ಲು ಅವ್ಳ ಮೇಲೆ ನಂಗೆ ಪ್ರೀತಿ ಬೆಳೆಯೋ ಹಾಗೆ ಮಾಡಿದ್ಯಾಕೆ ಅಂತ

ನಂಬಲೇನಾ ನಿನ್ನಾ ನಗೆಯನ್ನಾ??

Image
ಹುಡುಗೀ..              ಎಷ್ಟೋ ದಿನಗಳ ನಂತರ ಮತ್ತೆ ಮನದಲ್ಲಿ ಮುಗುಳ್ನಗೆಯೊಂದು ಮೂಡಿದೆ. ಬರಗಾಲದಿಂದ ಕಾದುಹೋಗಿದ್ದ ಹೃದಯದಂಗಳ ನೆನಪುಗಳ ಮಳೆಗೆ ಮೈಯೊಡ್ಡಿ ನೆನೆಯುತಿದೆ. ನಿನ್ನ ಮಾತು, ನಿನ್ನ ನಗು, ನಿನ್ನ ಕೋಪ ಎಲ್ಲವೂ ಮತ್ತೆ ಮನದ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿವೆ. ಇವಕ್ಕೆಲ್ಲಾ ಕಾರಣ ಆ ನಿನ್ನ ಒಂದೇ ಒಂದು ಕಣ್ಣೋಟ. ಅವತ್ತು ನೀನು ಮತ್ತೆ ನಿನ್ ಫ್ರೆಂಡ್ಗಳು ನಾ ಬರೆದ ಲೆಟರ್ ಗಳನ್ನೆಲ್ಲಾ ಓದುತ್ತಿರಬೇಕಾದರೆ ನಿನ್ ಫ್ರೆಂಡೊಬ್ಬಳು ನನ್ನ ಮುಖ ನೋಡಿ ಅಣ್ಣಾ.. ನಿಮ್ ಹುಡ್ಗಿ ಫೋಟೋ ತೋರ್ಸಿ ಅಂದಕೂಡಲೇ ನೀನು ಛಕ್ಕನೆ ನನ್ನ ಕಡೆ ತಿರುಗಿ ನಿನ್ನ ಮಾಮೂಲೀ ಸ್ಟೈಲ್ ನಲ್ಲಿ ಗುರಾಯಿಸಿಕೊಂಡು ನೋಡಿ, ಒಂಥರಾ ಸ್ಮೈಲ್ ಬಿಸಾಕಿದ್ಯಲ್ಲಾ ಅದ್ರ ಜೊತೆಗೆ ಉರಿಯೋ ಬೆಂಕಿಗೆ ತುಪ್ಪ ಸುರಿಯೋ ಥರದಲ್ಲಿ ಆಮೇಲೆ ನಂಗೆ ಕಾಲ್ ಮಾಡಿ ಮೊದಲಿನ ಥರಾನೇ ಕ್ಯೂಟ್ ಕ್ಯೂಟಾಗಿ ಮಾತಾಡ್ಕೊಂಡು, "ನೀ ಬರೆದ ಲೆಟರ್ ಎಲ್ಲವೂ ಚೆನ್ನಾಗಿದೆ ನಂಗೆ ಇಷ್ಟ ಆಯ್ತು" ಅಂದ್ಯಲ್ಲಾ ಅದೇ ಇಷ್ಟಕ್ಕೆಲ್ಲಾ ಮೂಲ ಕಾರಣ. ಅದ್ಯಾಕೋ ಗೊತ್ತಿಲ್ಲ ನೀ ಹಂಗೆ ನೋಡಿದಾಗಿನಿಂದ ನನ್ನ ಮನಸ್ಸು "ಅವ್ಳು ನಿನ್ನನ್ನ ಲವ್ ಮಾಡ್ತವ್ಳೆ ಕಣೋ" ಅಂತ ಹೇಳೋಕೆ ಶುರು ಮಾಡಿದೆ. ಹೌದೋ? ಇಲ್ವೋ? ಅಂತ ನಿನ್ನನ್ನೇ ಕೇಳೋಣ ಅಂತಂದ್ರೆ ಅದೇ ಮನಸ್ಸು ಅಡ್ಡಗಾಲು ಹಾಕ್ತಾ ಇದೆ. ಸೋ ನಂದೊಂಥರಾ ಒನ್ ಅಂಡ್ ಹಾಫ್ ವೇ ಲವ್ ಆಗೋಗಿದೆ.              ಅಂದಹಾಗೆ ನಿನಗೆ

ನಿನ್ನ ದನಿಗಾಗಿ, ನಿನ್ನ ಕರೆಗಾಗಿ, ನಿನ್ನ ಸಲುವಾಗಿ ಕಾಯುವೆ...

Image
     ನನ್ನೊಲವೇ..                ಖಾಲಿತನ ಆವರಿಸಿದೆ, ಬರೆಯಲೆಂದು ಲೇಖನಿ ಹಿಡಿದರೆ ಪದಗಳೇ ಸಿಗುತ್ತಿಲ್ಲ, ಬಿಳಿ ಹಾಳೆಯ ಮೇಲೆ ಬಿದ್ದ ಕಣ್ಣೀರ ಹನಿಗಳಿಂದಾಯ್ದ ಕೆಲ ನೆನಪುಗಳನ್ನು ಅಕ್ಷರ ರೂಪದಲ್ಲಿ ನಿನ್ನ ಮುಂದೆ ಹರವಿಡುತ್ತಿದ್ದೇನೆ ಒಮ್ಮೆ ಕಣ್ಣಾಯಿಸಿ ಬಿಡು....                ನೀನೇನು ನನ್ನ ಬಾಲ್ಯದ ಗೆಳತಿಯಲ್ಲ,  ಹೃದಯದೊಳಗೆ ನಿನ್ನ ಪ್ರವೇಶವಾಗಿ ದ್ವಾದಶ ಮಾಸಗಳಾಯಿತಷ್ಟೇ, ಅಂದು ನೀ ನನ್ನ ಕಣ್ಣಿಗೆ ಕಾಣದೇ ಇದ್ದಿದ್ದರೆ ಈ ಪತ್ರ ಬರೆಯುವ ಪ್ರಮೇಯವೇ ಬರುತ್ತಿರಲಿಲ್ಲವೇನು!! ನನ್ನ ಪಾಲಿಗೆ ಅದು ಮರೆಯಲಾಗದ ದಿನ, ಹೃದಯದೊಳಗೆ ಸಾವಿರ ಕನಸುಗಳು ಗರ್ಭತಳೆದ ದಿನ, ರಾತ್ರಿ ಬೀಳುತ್ತಿದ್ದ ತರಹೇವಾರಿ ಸ್ವಪ್ನಗಳಿಗೆ ಪೂರ್ಣವಿರಾಮವನ್ನಿಟ್ಟ ದಿನ.. ಅಂದಿನಿಂದ ಇಂದಿನವರೆಗೂ ನೀ ನನ್ನ ಕನಸಲ್ಲಿ ಬಾರದ ರಾತ್ರಿಯೇ ಇಲ್ಲ.. ನನ್ನ ಕನಸುಗಳನ್ನೆಲ್ಲ ನೀನೇ ಕೊಂಡುಕೊಂಡಿದ್ದಿಯೇನೋ ಎಂಬ ಅನುಮಾನ ಕಾಡುತ್ತಿದೆ, ಇವೆಲ್ಲಾ ಭಾವಗಳಿಗೀಗ ಭರ್ತಿ ಒಂದು ವರ್ಷ.                ನಿನ್ನನ್ನು ಮೊದಲ ಬಾರಿಗೆ ನೋಡಿದ ಮಧುರ ಕ್ಷಣ ನನ್ನ ಕಣ್ಣೆದುರಲ್ಲಿ ಇಂದಿಗೂ ಹಚ್ಚಹಸುರಾಗಿಯೇ ಇದೆ, ಬಹುಶಃ ನೀ ಅಂದು ತೊಟ್ಟಿದ್ದ ಹಸುರು ಬಣ್ಣದ ಚೂಡಿದಾರವೇ ಇದಕ್ಕೆ ಕಾರಣವಿರಬೇಕು, ಆ ಕ್ಷಣದಲ್ಲಿ "ವಾಹ್!! ಹುಡ್ಗಿ ಒಂದ್ ರೇಂಜಿಗೆ ಇದ್ದಾಳೆ.." ಅನ್ನಿಸಿದರೂ ಅದು ಪ್ರೀತಿಯೋ? ವಯೋಸಹಜ ಆಕರ್ಷಣೆಯೋ? ಎಂಬ ಗೊಂದಲಕ್ಕೆ ಸಿಲುಕಿ ಸುಮ್ಮನಾಗಿದ್ದ

ನಿಂಗೂ ಹಿಂಗೆಲ್ಲಾ ಅನ್ಸುತ್ತಾ??

Image
                                  ಏಯ್ ಕಂದ...!!                    ನೀನು ಅದ್ಯಾವ ಘಳಿಗೆಯಲ್ಲಿ ಹುಟ್ಟಿದ್ದು ಮಾರಾಯ..!! ನಿನ್ನ ಮುರಿದು ಹೋಗಿರುವ ಅರ್ಧ ಹಲ್ಲಿನ ಮೇಲೆ ಆಣೆ ಮಾಡಿ ಹೇಳ್ತೀನಿ - ನೀನು ಪೆದ್ದ ಕಣೋ.. ಅದ್ಯಾವ ಜನ್ಮದಲ್ಲಿ ಏನು ಘನಂದಾರಿ ಕೆಲಸ ಮಾಡಿದ್ದೆವೋ? ಏನೋ? ಈ ಜನ್ಮದಲ್ಲಿ ಮನುಷ್ಯರಾಗಿ ಹುಟ್ಟಿದ್ದೇವೆ, ಆ ಪರಮಾತ್ಮ ನಮ್ಮಿಬ್ಬರಿಗೂ ಮನುಷ್ಯ ರೂಪವನ್ನೇನೋ ನೀಡಿದ ಆದರೆ ಇದ್ರಲ್ಲಿ ನಾನು ಹುಡುಗನಾಗಿ ಹಾಗೂ ನೀನು ಹುಡುಗಿಯಾಗಿ ಹುಟ್ಟಬೇಕಿತ್ತು ಕಣೋ ಆಗ ಅದರ ಮಜಾನೇ ಬೇರೆ ಇರ್ತಿತ್ತು, ಹಾಗೇನಾದ್ರು ಆಗಿದ್ದಿದ್ದರೆ ನಾ ನಿನ್ನನ್ನ ಸಖತ್ತಾಗಿ ಗೋಳು ಹುಯ್ಕೋತಿದ್ದೆ, ನಿನ್ನ ಹಿಂದೆ ಮುಂದೆ ಸುತ್ತಾಡ್ಕೊಂಡು ಯರ್ರಾಬಿರ್ರಿ ಕಾಟ ಕೊಡ್ತಿದ್ದೆ, ಆದ್ರೆ ಈಗ ಎಲ್ಲವೂ ಉಲ್ಟಾ...!!! ಅಲ್ಲಾ ತಂದೆ ನೀನು ಅಷ್ಟೊಂದು ಪುಕ್ಕಲಾನಾ?? ಫಸ್ಟ್ ಟೈಮ್ ನೀನು ನನ್ನ ಜೊತೆ ಮಾತನಾಡುವಾಗಲೇ ಅಂದುಕೊಂಡೆ ನೀನು ತುಂಬಾ ಪಾಪದವನು ಅಂತ..! ನೀ ನನ್ನನ್ನ ಪ್ರೀತಿಸ್ತಾ ಇರೋದು ಇಡೀ ಊರಿಗೇ ಗೊತ್ತಿರೋ ವಿಷಯವಾದ್ರೂ ಅದನ್ನೇ ದೊಡ್ಡ ಸೀಕ್ರೇಟ್ ಅನ್ನೋ ಥರ ಸುತ್ತಿ ಬಳಸಿ ನನ್ನ ಹತ್ರ ಹೇಳೋಕೆ ನೋಡ್ತೀಯಲ್ಲಾ ಅದರ ಬದಲು ಡೈರೆಕ್ಟಾಗಿ ಒಂದೇ ಒಂದು ಸಲ ಐ ಲವ್ ಯೂ ಅಂತ ಹೇಳ್ಬಾರ್ದೇನೋ ಕೋತಿ??.                      ಲೋ ಪುಣ್ಯಾತ್ಮ, ನನಗೂ ಬೇರೆ ಹುಡುಗಿಯರ ಥರ ಆಸೆ, ಕನಸು ಎಲ್ಲಾ ಇದೆ ಕಣಯ್ಯಾ.. ಆದ್ರೆ ಅದಕ್ಕೆ ರೆಕ್ಕೆ ಕಟ್ಟಬೇಕಾ

ಮೊದಲ ಮಳೆಯಂತೆ ಎದೆಗೆ ಇಳಿದೆ ಮೆಲ್ಲಗೆ

Image
                            "ಅಬ್ಬಾ , ಅಂತೂ ಇಂತೂ ಸೆಕೆಂಡ್ ಪಿ.ಯು. ಎಕ್ಸಾಮ್ ಹತ್ತಿರ ಬಂತು. ಅದೊಂದು ಮುಗಿದು ಬಿಟ್ರೆ ದೊಡ್ಡ ಪೀಡೆ ತೊಲಗಿದ ಹಾಗೆ ಆಗುತ್ತೆ." ಹೀಗಂತ ನಾನು ಸೈನ್ಸ್ ಎಂಬ ಪಿಶಾಚಿಗೆ ಬೈತಾ ಇದ್ರೆ ಅತ್ತ ಕಡೆ ಇದೇ ಮಾತು ನಿನ್ನ ಬಾಯಲ್ಲೂ ಬಂದಿರಬಹುದು ಅಲ್ವಾ ? ಪರವಾಗಿಲ್ಲ ನೀ ಹಾಗೆ ಹೇಳಿದರೂ ನನಗೆ ಬೇಜಾರಿಲ್ಲ. ನಾ ಕೊಡೋ ಕಾಟಕ್ಕೆ ನೀನು ಆ ರೇಂಜಿನಲ್ಲಿ ಬಯ್ಯೋದು ಆಶ್ಚರ್ಯವೇನಲ್ಲ ಬಿಡು. ಇಷ್ಟು ದಿನ ಕಾಲೇಜಿನಲ್ಲಿ ಬೇಡ ಅಂದ್ರೂ ನಿನಗೆ ಎದುರಾಗುತ್ತಿದ್ದ ನಾನು ಇನ್ಮುಂದೆ ಹಾಗೆಲ್ಲ ನಿನ್ನೆದುರು ಬರೋದಿಲ್ಲ. ಕಾರಿಡಾರ್​ನಲ್ಲಿ ನಿಂತಾಗ ನಿನ್ನ ಕಡೆ ನೋಡ್ತಿದ್ದ ಎರಡು ಕಣ್ಗಳು , ಎದುರು ಸಿಕ್ಕ ಕೂಡಲೇ ದರ್ಶನ ನೀಡುತ್ತಿದ್ದ ಮೂವತ್ತೊಂದೂವರೆ ಹಲ್ಲುಗಳು.. ಎಲ್ಲವಕ್ಕೂ ಸದ್ಯದಲ್ಲೇ ವರ್ಗಾವಣೆ ಆಗಲಿದೆ. ಉರುಳುವ ಕಾಲಚಕ್ರದ ಜೊತೆಗೆ ಹೆಜ್ಜೆ ಹಾಕಬೇಕಾಗಿರುವುದು ಅನಿವಾರ್ಯ. ಇದು ಗೊತ್ತಿದ್ದರೂ ಇನ್ಮುಂದೆ ನೀನು ದಿನಾಲೂ ಸಿಗುವುದಿಲ್ಲ ಅನ್ನೋದನ್ನ ನೆನೆಸಿಕೊಂಡರೆ ಮನಸ್ಸು ಮೂಕವಾಗಿ ಬಿಡುತ್ತದೆ. ನಮ್ಮಿಬ್ಬರದ್ದು ತೀರಾ ಇತ್ತೀಚಿನ ಪರಿಚಯ. ಆರು ತಿಂಗಳ ಹಿಂದೆ ನೀನ್ಯಾರು ಅಂತ ನನಗೆ ಗೊತ್ತೇ ಇರಲಿಲ್ಲ. ನಾನ್ಯಾರು ಅಂತ ನಿನಗೆ ಗೊತ್ತಿತ್ತೋ ? ಗೊತ್ತಿರಲಿಲ್ವೋ ? ಅಂತ ನನ್ಗೆ ಗೊತ್ತಿಲ್ಲ. ನಿನ್ನನ್ನ ನಾನ್ಯಾಕೆ ಇಷ್ಟಪಟ್ಟೆ ಅನ್ನೋದು ನಂಗೊತ್ತು. ಆದ್ರೆ , ನಮ್ಮಿಬ್ಬರ ಮಧ್ಯೆ ಇಷ್ಟೊಂ

ಮೊದಲ ಪ್ರೀತಿ ಎರಡನೇ ಪತ್ರ

Image
ಹಾಯ್ ಮುದ್ದು,                   ಬರೆಯೋಕೆ ಹೇಗೆ ಶುರು ಮಾಡೋದು ಅಂತಾನೇ ಗೊತ್ತಾಗ್ತಿಲ್ಲ, ಖಾಲಿ ಹಾಳೆಯನ್ನ ನೋಡಿದ್ರೆ ಮನಸ್ಸಿನಲ್ಲಿರೋ ಪ್ರತಿಯೊಂದು ಅಕ್ಷರವನ್ನೂ ಕೆತ್ತಿ ಬಿಡಬೇಕು ಅನ್ಸುತ್ತೆ. ಅಷ್ಟೊಂದೆಲ್ಲ ಬರೆದು ಬಿಟ್ರೆ ಅನ್ಯಾಯವಾಗಿ ಬರಹಗಾರನಾಗಿ ಬಿಡ್ತೀನಿ, ಜೊತೆಗೆ ಉದ್ದುದ್ದ ಕಥೆ ಬರೆದ್ರೆ ನೀ ಓದೋದಿಲ್ಲ ಅಂತಾನೂ ಗೊತ್ತು ಆದ್ರಿಂದ ಸ್ವೀಟ್ ಅಂಡ್ ಶಾರ್ಟ್ ಆಗಿ ಬರೆದು ಬೇಗ ಪೂರ್ಣ ವಿರಾಮ ಇಟ್ಟು ಬಿಡ್ತೀನಿ, ಜಾಸ್ತಿ ಕೊರೆಯದೆ ವಿಷಯಕ್ಕೆ ಬರ್ತೀನಿ ನಿನ್ನೆರಡು ಪುಟ್ಟ ಕಣ್ಗಳನ್ನು ಸರಿಯಾಗಿ ಉಜ್ಜಿಕೊಂಡು ಓದೋಕೆ ಅಣಿಯಾಗು.                   ಇವತ್ತಿಗೆ ನನ್ನ ನಿನ್ನ ಪರಿಚಯವಾಗಿ ಆರು ತಿಂಗಳು ಕಳೆದವು,ಇಡೀ ದೇಶ ಅರವತ್ತೆಂಟನೇ ಸ್ವಾತಂತ್ರ್ಯೋತ್ಸವ ಆಚರಿಸೋಕೆ ಸಿದ್ಧ ಆಗ್ತಿದ್ರೆ, ನನ್ನ ಮನಸ್ಸು ಮಾತ್ರ ನಿನ್ನ ಮುಂಗುರುಳಿಗೆ ಸಿಲುಕಿ, ನಿನ್ನ ಕುಡಿನೋಟಕ್ಕೆ ಶರಣಾಗಿ, ನಿನ್ನೆದೆಯ ಗುಲಾಮನಾಗಿ ಸ್ವಾತಂತ್ರ್ಯವನ್ನು ಕಳೆದುಕೊಂಡಿತ್ತು. ನಮ್ಮಿಬ್ಬರ ಭೇಟಿ ತೀರಾ ಆಕಸ್ಮಿಕ, ಆ ಆಕಸ್ಮಿಕ ಘಟನೆಯೇ ನನ್ನ ಜೀವನಕ್ಕೆ ಒಂದು ಹೊಸ ಜೀವವನ್ನು ಪರಿಚಯಿಸಿಕೊಟ್ಟಿದ್ದು, ಯಾರೊಂದಿಗೂ ಅಷ್ಟು ಬೇಗ ಬೆರೆಯದ ನನ್ನನ್ನು ನೀನು ಅಯಸ್ಕಾಂತದಂತೆ ಸೆಳೆದು ಬಿಟ್ಟಿದ್ದೆ, ಅವಶ್ಯಕತೆಗಿಂತ ಜಾಸ್ತಿ ಹತ್ತಿರ ಆಗಿ ಬಿಟ್ಟಿದ್ದೆ, ಈ ಆರು ತಿಂಗಳಲ್ಲಿ ನಾವಿಬ್ಬರೂ ನಮಗೇ ಗೊತ್ತಿಲ್ಲದಂತೆ ಸ್ನೇಹ, ಕೋಪ, ತಮಾಷೆ, ಹರಟೆ, ತಲೆಹರಟೆ, ಕೋಳಿಜಗಳ ಅನ್ಕೊಂ